Select Your Language

Notifications

webdunia
webdunia
webdunia
webdunia

ಮೊದಲ ಬಾರಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಕಿರುತೆರೆಗೆ

ಮೊದಲ ಬಾರಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಕಿರುತೆರೆಗೆ
ಬೆಂಗಳೂರು , ಶುಕ್ರವಾರ, 24 ಜನವರಿ 2020 (08:56 IST)
ಬೆಂಗಳೂರು: ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಘಟಾನುಘಟಿ ತಾರೆಯರು ನಿರೂಪಕರಾಗುವುದು, ಜಡ್ಜ್ ಗಳಾಗುವುದು ಸಾಮಾನ್ಯವಾಗಿದೆ. ಆದರೆ ತಾವಾಯಿತು ತಮ್ಮ ಸಂಗೀತವಾಯಿತು ಎನ್ನುವ ಸಂಗೀತ ನಿರ್ದೇಶಕ ಇಂತಹ ಕಾರ್ಯಕ್ರಮಗಳಿಂದ ದೂರವೇ ಇದ್ದವರು.


ಆದರೆ ಇದೀಗ ಕಲರ್ಸ್ ಕನ್ನಡದ ಹಾಡು ಕರ್ನಾಟಕ ಶೋ ಮೂಲಕ ಕಿರುತೆರೆಗೆ ತೀರ್ಪುಗಾರರಾಗಿ ಬರುತ್ತಿದ್ದಾರೆ. ಸಾಮಾನ್ಯ ಜನರಿಗೂ ಹಾಡುವ ಅವಕಾಶ ನೀಡಲು ಕಲರ್ಸ್ ಕನ್ನಡ ವೇದಿಕೆ ಒದಗಿಸುತ್ತಿದ್ದು, ಈ ಶೋನಲ್ಲಿ ಹರಿಕೃಷ್ಣ ಜತೆಗೆ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ, ರಘು ದೀಕ್ಷಿತ್, ಗಾಯಕಿ ಇಂದು ನಾಗರಾಜ್, ವಾರಿಜಾಶ್ರೀ ಮುಂತಾದವರೂ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ಬಿಗ್ ಬಾಸ್ ಕನ್ನಡ ಖ್ಯಾತಿಯ ಚಂದನಾ ಈ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ನಿರೂಪಕರಾಗುತ್ತಿದ್ದಾರೆ. ಸದ್ಯದಲ್ಲೇ ಈ ಶೋ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಜನಿಕಾಂತ್ ವಿವಾದಿತ ಹೇಳಿಕೆಗೆ ಭಾರೀ ಬೆಂಬಲ