Publish Date: Tue, 21 Jan 2020 (10:12 IST)
Updated Date: Tue, 21 Jan 2020 (10:13 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿದ್ದ ಮತ್ತೊಂದು ಧಾರವಾಹಿ ಈ ವಾರ ಅಂತ್ಯ ಕಾಣುತ್ತಿದೆ. ಸತತ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಈ ವಾರ ಕೊನೆಗೊಳ್ಳುತ್ತಿದೆ.
ನಿನ್ನೆ ಕೊನೇ ದಿನದ ಶೂಟಿಂಗ್ ಮುಗಿಸಿದ ಧಾರವಾಹಿ ತಂಡ ಲೈವ್ ಬಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ. ನಾಯಕಿ ಪಾತ್ರಧಾರಿಗಳಾದ ಗೊಂಬೆ ಅಲಿಯಾಸ್ ಶ್ರುತಿ ಮತ್ತು ಚಿನ್ನು ಇಡೀ ಧಾರವಾಹಿ ತಂಡದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಧನ್ಯವಾದ ಸಲ್ಲಿಸಿದ್ದಲ್ಲದೆ, ಇನ್ಮುಂದೆ ಶೂಟಿಂಗ್ ಮತ್ತು ಇಡೀ ತಂಡವನ್ನು ಮಿಸ್ ಮಾಡಿಕೊಳ್ಳುವುದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಆರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಇತ್ತೀಚೆಗಷ್ಟೇ ಕೊನೆಯಾಗಿದೆ. ಇದೀಗ ಲಕ್ಷ್ಮೀ ಬಾರಮ್ಮಾ ಸರದಿ. ಉತ್ತಮ ಟಿಆರ್ ಪಿ ಹೊಂದಿದ್ದ ಇವೆರಡೂ ಧಾರವಾಹಿಗಳು ಇಷ್ಟು ಸಮಯ ಪ್ರಸಾರವಾಗಿದ್ದು ದಾಖಲೆಯೇ ಸರಿ.
Krishnaveni K
Publish Date: Tue, 21 Jan 2020 (10:12 IST)
Updated Date: Tue, 21 Jan 2020 (10:13 IST)