Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಿಂದ ಕಿಶನ್ ಹೊರಕ್ಕೆ: ವೀಕ್ಷಕರಿಗೆ ಶಾಕ್

ಬಿಗ್ ಬಾಸ್ ಕನ್ನಡ
ಬೆಂಗಳೂರು , ಭಾನುವಾರ, 19 ಜನವರಿ 2020 (12:40 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಆ ಪೈಕಿ ಒಬ್ಬರು ಸ್ಪರ್ಧಿಯನ್ನು ನಿನ್ನೆಯ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಯಿಂದ ಹೊರಗೆ ಕರೆದಿದ್ದಾರೆ.


ಅವರೇ ಕಿಶನ್. ಡಬಲ್ ಎಲಿಮಿನೇಷನ್ ಪೈಕಿ ಮೊದಲನೆಯ ಸ್ಪರ್ಧಿಯಾಗಿ ಕಿಶನ್ ಮನೆಯಿಂದ ಹೊರಬಿದ್ದಿರುವುದು ವೀಕ್ಷಕರಿಗೆಲ್ಲಾ ಭಾರೀ ಶಾಕ್ ನೀಡಿದೆ. ಕಿಶನ್ ಉತ್ತಮ ಸ್ಪರ್ಧಿಯಾಗಿದ್ದರು ಅವರನ್ನು ಹೇಗೆ ಹೊರ ಕಳುಹಿಸಿದಿರಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೊಬ್ಬ ಎಲಿಮಿನೇಟ್ ಆಗಲಿರುವ ಸ್ಪರ್ಧಿಯ ಹೆಸರನ್ನು ಕಿಚ್ಚ ಇಂದು ಬಹಿರಂಗಪಡಿಸಲಿದ್ದಾರೆ. ಮೂಲಗಳ ಪ್ರಕಾರ ಪ್ರಿಯಾಂಕ ಹೊರ ಬರಬಹುದು ಎನ್ನಲಾಗಿದೆ. ಆದರೆ ನಿಜವಾಗಿ ಯಾರು ಹೊರ ಬರುತ್ತಾರೆಂದು ರಾತ್ರಿಯ ಕಿಚ್ಚನ ಶೋವರೆಗೂ ಕಾಯಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಟಾಲಿವುಡ್ ನಿಂದ ಭಾರೀ ಆಫರ್