Publish Date: Mon, 20 Jan 2020 (10:18 IST)
Updated Date: Mon, 20 Jan 2020 (19:20 IST)
ಬೆಂಗಳೂರು: ಬಿಗ್ ಬಾಸ್ ನಿಂದ ಈ ಮೊದಲೇ ಹೇಳಿದಂತೆ ಈ ವಾರ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಕಿಶನ್ ಮತ್ತು ಚಂದನ್ ಆಚಾರ್ ಹೊರಬಿದ್ದಿದ್ದಾರೆ.
ಆದರೆ ಈ ಇಬ್ಬರೂ ಸ್ಪರ್ಧಿಗಳ ಪೈಕಿ ಚಂದನ್ ಗೆ ಅನ್ಯಾಯವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಚಂದನ್ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಪ್ರತೀ ವಾರವೂ ನಾಮಿನೇಟ್ ಆಗುತ್ತಲೇ ಇದ್ದರು. ಆದರೆ ಅವರ ವೋಟಿಂಗ್ ಪರ್ಸೆಂಟೇಜ್ ಕೂಡಾ ಚೆನ್ನಾಗಿಯೇ ಇತ್ತು.
ಒಂದು ರೀತಿ ನೇರ ನಡೆ ನುಡಿಯ ಚಂದನ್ ಬಗ್ಗೆ ಮನೆಯವರಿಗೂ ಅಸಮಾಧಾನವಿತ್ತು. ಹೀಗಾಗಿ ಅವರೇ ಹೇಳಿಕೊಳ್ಳುವಂತೆ ಮನೆಯಲ್ಲಿ ಏಕಾಂಗಿಯಾಗಿದ್ದರು. ಆದರೆ ವೀಕ್ಷಕರ ಬೆಂಬಲ ಅವರ ಬೆನ್ನಿಗಿದ್ದ ಕಾರಣ ಇಷ್ಟು ವಾರ ಉಳಿದುಕೊಂಡಿದ್ದರು. ಆದರೆ ನಿನ್ನೆ ಕಿಚ್ಚ ಸುದೀಪ್ ತಮ್ಮ ಕಾರ್ಯಕ್ರಮದಲ್ಲಿ ಚಂದನ್ ಈ ವಾರ ಹೊರ ಬರುತ್ತಿರುವ ವಿಚಾರ ಪ್ರಕಟಿಸಿದ್ದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಬಿಗ್ ಬಾಸ್ ನಿಂದ ಚಂದನ್ ಗೆ ಅನ್ಯಾಯವಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.