Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಲ್ಲೀಗ ಢವ ಢವ ಆತಂಕ!

ಬಿಗ್ ಬಾಸ್ ಕನ್ನಡ
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲ ಮೂಡಿದೆ.


ಇಷ್ಟು ದಿನ ಮನೆಯಲ್ಲಿದ್ದು ಆಡಿ ಈ ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಲು ಯಾವ ಸ್ಪರ್ಧಿಯೂ ಬಯಸಲ್ಲ. ಹಾಗಿದ್ದರೂ ಒಬ್ಬರು ಈ ವಾರ ಎಲಿಮಿನೇಟ್ ಆಗಲೇಬೇಕು. ಆ ಪೈಕಿ ಟಾಸ್ಕ್ ಗೆದ್ದು ಫೈನಲ್ ಗೆ ಅರ್ಹತೆ ಪಡೆದಿರುವ ವಾಸುಕಿ ಸೇಫ್ ಆಗಿದ್ದು, ಉಳಿದೆಲ್ಲಾ ಸ್ಪರ್ಧಿಗಳ ಎದೆಯಲ್ಲಿ ಆತಂಕ ಶುರುವಾಗಿದೆ.

ಇವರ ಪೈಕಿ ಅಪಾರ ಜನ ಬೆಂಬಲವಿರುವ ಶೈನ್ ಶೆಟ್ಟಿ, ಕುರಿ ಪ್ರತಾಪ್, ಭೂಮಿ ಶೆಟ್ಟಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಆದರೆ ಹರೀಶ್ ರಾಜ್, ಪ್ರಿಯಾಂಕ ಡೇಂಜರ್ ಜೋನ್ ನಲ್ಲಿರುವ ಪ್ರಮುಖರು. ಹಾಗಿದ್ದರೂ ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅಂತಿಮವಾಗಿ ಯಾರು ಹೊರಹೋಗುತ್ತಾರೆ ಎಂಬುದನ್ನು ಇಂದು ಮತ್ತು ನಾಳೆ ನಡೆಯಲಿರುವ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ತಿಳಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಗಲಿದೆ ಈ ಗಿಫ್ಟ್