Select Your Language

Notifications

webdunia
webdunia
webdunia
webdunia

ಬಿಗ್ ಬಾಸ್: ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾದ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ನಲ್ಲಿ ಅತೀ ಹೆಚ್ಚು ಪದಕ ಪಡೆದ ಸ್ಪರ್ಧಿ ಫೈನಲ್ ಗೆ ನೇರವಾಗಿ ಆಯ್ಕೆಯಾಗಲಿದ್ದಾರೆ ಎಂದು ಬಿಗ್ ಬಾಸ್ ಈ ಮೊದಲೇ ಘೋಷಿಸಿತ್ತು. ಅದರಂತೆ ನೇರವಾಗಿ ಫೈನಲ್ ಗೆ ಆಯ್ಕೆಯಾದ ಆ ಸ್ಪರ್ಧಿ ಯಾರು ಗೊತ್ತಾ?


ಈ ವಾರದ ಟಾಸ್ಕ್ ಗಳಲ್ಲಿ ಒಟ್ಟು ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡು ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಉಳಿದಂತೆ ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಪ್ರಿಯಾಂಕ, ದೀಪಿಕಾ ದಾಸ್ ತಲಾ ಒಂದೊಂದು ಪದಕ ಗೆದ್ದಿದ್ದರು. ಆದರೆ ಹರೀಶ್ ರಾಜ್ ಮತ್ತು ಕುರಿ ಪ್ರತಾಪ್ ಗೆ ಒಂದೇ ಒಂದು ಪದಕ ಗೆಲ್ಲಲು ಸಾಧ‍್ಯವಾಗಿರಲಿಲ್ಲ. ಹೀಗಾಗಿ ಇವರೆಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ.

ಶೈನ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬಹುದು ಎಂದು ವೀಕ್ಷಕರು ಊಹೆ ಮಾಡುತ್ತಿದ್ದರೂ ಈ ವಾರದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೇ ನೇರವಾಗಿ ಫೈನಲ್ ಗೆ ಆಯ್ಕೆಯಾಗುವ ಅವಕಾಶ ಕಳೆದುಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ‘ರಾಬರ್ಟ್’ ಹಾಡುಗಳ ರೆಕಾರ್ಡಿಂಗ್ ಯಶ್ ರಾಜ್ ಸ್ಟುಡಿಯೋದಲ್ಲಿ