Select Your Language

Notifications

webdunia
webdunia
webdunia
webdunia

ಕೊನೆಗೂ ಸ್ಟಾರ್ ನಟ ಸೂರ್ಯ ಜತೆ ಅವಕಾಶ ಗಿಟ್ಟಿಸಿಕೊಂಡರಾ ರಶ್ಮಿಕಾ ಮಂದಣ್ಣ?

ಕೊನೆಗೂ ಸ್ಟಾರ್ ನಟ ಸೂರ್ಯ ಜತೆ ಅವಕಾಶ ಗಿಟ್ಟಿಸಿಕೊಂಡರಾ ರಶ್ಮಿಕಾ ಮಂದಣ್ಣ?
ಚೆನ್ನೈ , ಸೋಮವಾರ, 3 ಫೆಬ್ರವರಿ 2020 (09:12 IST)
ಚೆನ್ನೈ: ನಟಿ ರಶ್ಮಿಕಾ ಮಂದಣ್ಣ ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಸ್ಟಾರ್ ನಟರಿಗೆ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಈಗ ತಮಿಳಿನ ಸ್ಟಾರ್ ನಟ ಸೂರ್ಯ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.


ಹರಿ ನಿರ್ದೇಶಿಸಲಿರುವ ಈ ಸಿನಿಮಾಗೆ ಈ ಮೊದಲು ಮಾಳವಿಕಾ ಮೋಹನ್ ಮುಖ್ಯ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇದೀಗ ರಶ್ಮಿಕಾ ಹೆಸರು ಕೇಳಿಬರುತ್ತಿದೆ.

ರಶ್ಮಿಕಾ ಜತೆಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ರಶ್ಮಿಕಾ ಸೂರ್ಯ ಸಹೋದರ ಕಾರ್ತಿ ಜತೆ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ಸೂರ್ಯಗೂ ನಾಯಕಿಯಾಗಬಹುದು ಎಂಬ ಸುದ್ದಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಗೆದ್ದ ಶೈನ್ ಶೆಟ್ಟಿ