Publish Date: Mon, 03 Feb 2020 (09:05 IST)
Updated Date: Mon, 03 Feb 2020 (09:09 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ರನ್ನರ್ ಅಪ್ ಆಗಿ ಕುರಿ ಪ್ರತಾಪ್ ಬಹುಮಾನ ಗೆದ್ದಿದ್ದಾರೆ.
ವಿಜೇತರಾದ ಶೈನ್ ಗೆ 61 ಲಕ್ಷ ರೂ. ನಗದು ಬಹುಮಾನ ಜತೆಗೆ ವಿನ್ನರ್ ಟ್ರೋಫಿ ಕೂಡಾ ಸಿಕ್ಕಿದೆ. ನಿನ್ನೆ ನಡೆದ ಫೈನಲ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ವಿಜೇತರನ್ನು ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಗ್ ಬಾಸ್ ನ ಎಲ್ಲಾ ಹಳೆಯ ಸ್ಪರ್ಧಿಗಳೂ ಉಪಸ್ಥಿತರಿದ್ದರು. ಇನ್ನು, ಅತೀ ಹೆಚ್ಚು ಜನಪ್ರಿಯತೆ ಹೊಂದಿದ್ದ ಶೈನ್ ಗೆಲ್ಲಬಹುದು ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ವಾಸುಕಿ, ಕುರಿ ಪ್ರತಾಪ್ ಕೂಡಾ ಪೈಪೋಟಿಯಲ್ಲಿದ್ದರು. ಅಂತಿಮವಾಗಿ ವಾಸುಕಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.