Publish Date: Fri, 31 Jan 2020 (10:44 IST)
Updated Date: Fri, 31 Jan 2020 (10:46 IST)
ಹೈದರಾಬಾದ್: ತೆಲುಗು ಸ್ಟಾರ್ ನಟ ನಿತಿನ್ ಜತೆ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ತೆಲುಗು ಸಿನಿಮಾ ‘ಭೀಷ್ಮ’. ಈ ಚಿತ್ರದ ಹಾಡೊಂದರಲ್ಲಿ ರಶ್ಮಿಕಾ ನೀಡಿರುವ ಸೆಕ್ಸಿ ಪೋಸ್ ಈಗ ವೈರಲ್ ಆಗಿದೆ.
ವಾಟ್ಟೆ ಬ್ಯೂಟಿ ಎನ್ನುವ ಹಾಡು ಇಂದು ಸಂಜೆ ಬಿಡುಗಡೆಯಾಗಲಿದ್ದು, ಈ ಹಾಡಿನ ಪೋಸ್ಟರ್ ನಲ್ಲಿ ರಶ್ಮಿಕಾ ನಿತಿನ್ ಗೆ ಅಂಟಿಕೊಂಡು ನೀಡಿರುವ ಸೆಕ್ಸಿ ಪೋಸ್ ಸದ್ದು ಮಾಡುತ್ತಿದೆ.
ಭೀಷ್ಮ ಸಿನಿಮಾದ ಟೀಸರ್ ನಲ್ಲೂ ರಶ್ಮಿಕಾ ಸೊಂಟವೇ ಸುದ್ದಿಯಾಗಿತ್ತು. ಈಗ ರೊಮ್ಯಾಂಟಿಕ್ ಹಾಡೂ ಗಮನ ಸೆಳೆಯುತ್ತಿದೆ. ಚಿತ್ರ ಫೆಬ್ರವರಿ 21 ಕ್ಕೆ ರಿಲೀಸ್ ಆಗಲಿದ್ದು, ಇವರಿಬ್ಬರ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.