Select Your Language

Notifications

webdunia
webdunia
webdunia
webdunia

ಆಂಧ್ರ, ತೆಲಂಗಾಣ ವಿಭಾಗದ ಐಟಿ ಅಧಿಕಾರಿಗಳಿಂದ ದಾಳಿ: ರಶ್ಮಿಕಾಗೆ ಬುಲಾವ್

ಆಂಧ್ರ, ತೆಲಂಗಾಣ ವಿಭಾಗದ ಐಟಿ ಅಧಿಕಾರಿಗಳಿಂದ ದಾಳಿ: ರಶ್ಮಿಕಾಗೆ ಬುಲಾವ್
ಬೆಂಗಳೂರು , ಗುರುವಾರ, 16 ಜನವರಿ 2020 (13:31 IST)
ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಕಿರಿಕ್ ಪಾರ್ಟಿ ಹೀರೋಯಿನ್ ರಶ್ಮಿಕಾ ಮಂದಣ್ಣ ಮನೆಗೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಆಂಧ್ರ ಮತ್ತು ತೆಲಂಗಾಣ ವಿಭಾಗದವರು ಎನ್ನಲಾಗಿದೆ.


ತೆಲುಗಿನಲ್ಲಿ ಟಾಪ್ ಹೀರೋಯಿನ್ ಎನಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಆದಾಯದ ಬಗ್ಗೆ ಐಟಿ ಕಣ್ಣು ಬಿದ್ದಿದ್ದು, ಸತತ ಐದು ಗಂಟೆಯಿಂದ ವಿರಾಜಪೇಟೆಯಲ್ಲಿರುವ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಮಾಡಿದ ಅಧಿಕಾರಿಗಳ ಪೈಕಿ ಕರ್ನಾಟಕ ಮೂಲದವರು ಯಾರೂ ಇಲ್ಲ ಎನ್ನಲಾಗಿದೆ.

ಇನ್ನು, ವಿರಾಜಪೇಟೆಯ ನಿವಾಸದಲ್ಲಿರುವ ಐಟಿ ಅಧಿಕಾರಿಗಳಿಗೆ ರಶ್ಮಿಕಾ ತಂದೆ ಮದನ್ ಮಂದಣ್ಣ ಮಾಹಿತಿ ನೀಡುತ್ತಿದ್ದಾರೆ. ಸುಮಾರು 50 ಎಕರೆ ಕಾಫಿ ಎಸ್ಟೇಟ್, ಹಾಲ್ ಮುಂತಾದ ವ್ಯವಹಾರಗಳನ್ನು ಹೊಂದಿರುವ ಮದನ್ ಮಂದಣ್ಣರಿಂದ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು ರಶ್ಮಿಕಾಗೂ ಬುಲಾವ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ದಾಖಲೆಗಳ ಬಗ್ಗೆ ಮಾಹಿತಿ ನೀಡಲು ರಶ್ಮಿಕಾ ಐಟಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ‍್ಯತೆಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣಗೆ ಈ ವ್ಯವಹಾರಗಳೇ ಮುಳುವಾಯಿತೇ?!