Publish Date: Fri, 31 Jan 2020 (10:33 IST)
Updated Date: Fri, 31 Jan 2020 (10:34 IST)
ಮುಂಬೈ: ಜಾಗತಿಕ ಬೌಲರ್ ಗಳ ಪೈಕಿ ಅತ್ಯುತ್ತಮ ವೇಗಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಬೌಲಿಂಗ್ ಟಿಪ್ಸ್ ನೀಡಲು ಹೋಗಿ ಟ್ರೋಲ್ ಗೊಳಗಾಗಿದ್ದಾರೆ.
ಪದೇ ಪದೇ ಇಂತಹ ಟ್ವೀಟ್ ಗಳನ್ನು ಮಾಡಿ ಹಿಗ್ಗಾ ಮುಗ್ಗಾ ಟ್ರೋಲ್ ಗೊಳಗಾಗುವ ಸಂಜಯ್ ಮಂಜ್ರೇಕರ್ ಈ ಬಾರಿ ಬುಮ್ರಾಗೆ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಟಿಪ್ಸ್ ಕೊಟ್ಟು ಟೀಕೆಗೊಳಗಾಗಿದ್ದಾರೆ.
ನೀನೊಬ್ಬ ಸಾಧಾರಣ ಕ್ರಿಕೆಟಿಗ. ಹೋಗಿ ಹೋಗಿ ಬುಮ್ರಾಗೇ ಟಿಪ್ಸ್ ಕೊಡುತ್ತೀರಾ? ಅವರು ನಿಮ್ಮಿಂದ ಕಲಿಯಬೇಕಾಗಿಲ್ಲ ಬಿಡಿ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇಂತಹ ತಲೆ ಬುಡವಿಲ್ಲದ ಟ್ವೀಟ್ ಮಾಡಿ ಬೈಸಿಕೊಳ್ಳೋದೇ ನಿಮ್ಮ ಅಭ್ಯಾಸವಾ ಎಂದು ಲೇವಡಿ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಬುಮ್ರಾ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿರುವ ರೀತಿ ಬಗ್ಗೆ ಮಂಜ್ರೇಕರ್ ಕಾಮೆಂಟ್ ಮಾಡಿದ್ದರು.
Krishnaveni K
Publish Date: Fri, 31 Jan 2020 (10:33 IST)
Updated Date: Fri, 31 Jan 2020 (10:34 IST)