Publish Date: Fri, 31 Jan 2020 (09:58 IST)
Updated Date: Fri, 31 Jan 2020 (09:59 IST)
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸಲಿರುವ ದಿನಾಂಕ ಬಹಿರಂಗವಾಗಿದೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಕಾರ್ಯಕ್ರಮ ಫೆಬ್ರವರಿ 10 ರಂದು ನಡೆಯುವ ಸಾಧ‍್ಯತೆಯಿದೆ ಎಂದು ಕುಮಾರಸ್ವಾಮಿ ಮಾಧ‍್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.
ನಾವು ಕುಟುಂಬದವರೆಲ್ಲಾ ಕೂತು ಒಳ್ಳೆಯ ದಿನ ಶಾಸ್ತ್ರೋಸ್ತಕವಾಗಿ ನಿರ್ಧರಿಸುತ್ತೇವೆ. ಈಗಿನ ಪ್ರಕಾರ ಫೆಬ್ರವರಿ 10 ಕ್ಕೆ ನಿಶ್ಚಿತಾರ್ಥ ನಡೆಯಲಿದೆ. ಏಪ್ರಿಲ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.