Select Your Language

Notifications

webdunia
webdunia
webdunia
webdunia

ಕೀರ್ತಿ ಸುರೇಶ್ ಈ ಫೋಟೊದಿಂದ ಆಘಾತಗೊಳಗಾದ ಅಭಿಮಾನಿಗಳು

ಕೀರ್ತಿ ಸುರೇಶ್ ಈ ಫೋಟೊದಿಂದ ಆಘಾತಗೊಳಗಾದ ಅಭಿಮಾನಿಗಳು
ಚೆನ್ನೈ , ಮಂಗಳವಾರ, 20 ಅಕ್ಟೋಬರ್ 2020 (09:50 IST)
ಚೆನ್ನೈ : ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿ. ಇವರು ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಹಲವಾರು ಅಭಿಮಾನಿಗಳ ಮನಸೆಳೆದಿದ್ದಾರೆ. ಇಂತಹ ನಟಿಮಣಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೊವೊಂದನ್ನು ಪೊಸ್ಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು, ನಟಿ ಕೀರ್ತಿ ಸುರೇಶ್ ಅವರು ತಮಿಳು ಚಿತ್ರರಂಗದಲ್ಲಿ ತಮ್ಮ ಅದ್ಭುತ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ ಸಂಯೋಜಕ, ಗಾಯಕ ಅನಿರುದ್ಧ ಅವರ ಜೊತೆ ಭುಜದ ಮೇಲೆ ಕೈಹಾಕಿದ ಕ್ಲೋಸ್ ಆದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ಈ ಫೋಟೊ ನೋಡಿದ  ಅಭಿಮಾನಿಗಳು ಕೀರ್ತಿ ಸುರೇಶ್ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದು, ಇವರಿಬ್ಬರ ನಡುವೆ ಲವ್ವಿ ಡವ್ವಿ ಶುರುವಾಗಿದೆಯೇ? ಎಂಬ ಕುತೂಹಲ ಹೊರಹಾಕಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ‘ರಾಬರ್ಟ್’ ಸಿನಿಮಾ ರಿಲೀಸ್ ಡೇಟ್ ಕೊನೆಗೂ ಫಿಕ್ಸ್?