ಚೆನ್ನೈ : ತಮಿಳು ಚಿತ್ರರಂಗದ ಪ್ರಸಿದ್ಧ ನಟ ಮುರಳಿ ಅವರ ಪುತ್ರ ನಟ ಅರ್ಥವ್ ಹುಡುಗಿಯರ ಪಾಲಿನ ಡ್ರೀಮ್ ಬಾಯ್ ಎನಿಸಿಕೊಂಡಿದ್ದಾರೆ. ಇದೀಗ ಅವರು ಮದುವೆಯಾಗಲು ನಿರ್ಧರಿಸಿದ್ದಾರಂತೆ.
ಹೌದು. ನಟ ಅರ್ಥವ್ ಅವರು ಕೆಲವು ವರ್ಷಗಳಿಂದ ಗೋವಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಈಗ ಇವರಿಬ್ಬರ ಮದುವೆಗೆ ಮನೆಯವರ ಒಪ್ಪಿಗೆ ಸಿಕ್ಕಿದ್ದ ಹಿನ್ನಲೆಯಲ್ಲಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಹಾಗೇ ಇತ್ತೀಚೆಗೆ ನಟ ಅರ್ಥವ್ ಅವರ ಸಹೋದರ ಆದರ್ಶ್ ಅವರ ವಿವಾಹ ತುಂಬಾ ಸರಳವಾಗಿ ನಡೆದಿತ್ತು.
ಆನಂತರ ನಿಮ್ಮ ಸಹೋದರ ನಟ ಅರ್ಥವ್ ಅವರ ಮದುವೆ ಯಾವಾಗ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನಿಸಲು ಶುರು ಮಾಡಿದ್ದಾರೆ. ಆದಕಾರಣ ನಟ ಅರ್ಥವ್ ಅವರ ವಿವಾಹವನ್ನು 2021 ರ ಜನವರಿಯಲ್ಲಿ ಸಹೋದರ ಆದರ್ಶ್ ಮದುವೆಯಾದ ವೇದಿಕೆಯ ಮೇಲೆಯೇ ನಡೆಸಲು ನಿರ್ಧರಿಸಲಾಗಿದೆ ಎಂದು ಅವರ ಸ್ನೇಹಿತರ ವಲಯದಿಂದ ವಿಚಾರ ತಿಳಿದುಬಂದಿದೆ ಎನ್ನಲಾಗಿದೆ.