Publish Date: Sun, 18 Oct 2020 (08:53 IST)
Updated Date: Sun, 18 Oct 2020 (08:56 IST)
ದುಬೈ: ಐಪಿಎಲ್ 13 ರಲ್ಲಿ ಚೆನ್ನೈ ಸೋಲಿನ ಸರಪಳಿ ಮುಂದುವರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. ಫಾ ಡು ಪ್ಲೆಸಿಸ್ 58, ಅಂಬಟಿ ರಾಯುಡು 45, ಶೇನ್ ವ್ಯಾಟ್ಸನ್ 36 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಆರಂಭದಲ್ಲಿ ಬೇಗನೇ ವಿಕೆಟ್ ಕಳೆದುಕೊಂಡರೂ ಶಿಖರ್ ಧವನ್ ಹೊಡೆಬಡಿಯ ಆಟವಾಡಿ ಶತಕ ಗಳಿಸಿ ತಂಡವನ್ನು ಆಧರಿಸಿದರು. ಶಿಖರ್ 58 ಎಸೆತಗಳಿಂದ ಅಜೇಯ 101 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಡೆಲ್ಲಿ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.