Select Your Language

Notifications

webdunia
webdunia
webdunia
webdunia

ಮಿಡ್ ಸೀಸನ್ ನಲ್ಲಿ ಆಟಗಾರರನ್ನು ಖರೀದಿ ಮಾಡದೇ ಇರಲು ನಿರ್ಧರಿಸಿದ ಸಿಎಸ್ ಕೆ

ಮಿಡ್ ಸೀಸನ್ ನಲ್ಲಿ ಆಟಗಾರರನ್ನು ಖರೀದಿ ಮಾಡದೇ ಇರಲು ನಿರ್ಧರಿಸಿದ ಸಿಎಸ್ ಕೆ
ದುಬೈ , ಗುರುವಾರ, 15 ಅಕ್ಟೋಬರ್ 2020 (11:47 IST)
ದುಬೈ: ಐಪಿಎಲ್ 13 ರಲ್ಲಿ ಒಂದು ಹಂತದ ಪಂದ್ಯಗಳು ಮುಗಿದಿದ್ದು, ಎಲ್ಲಾ ಫ್ರಾಂಚೈಸಿಗಳಿಗೆ ಈಗ ಮಿಡ್ ಸೀಸನ್ ಟ್ರೇಡ್ ಮೂಲಕ ಆಟಗಾರರ ಖರೀದಿ-ವಿನಿಮಯಕ್ಕೆ ಅವಕಾಶವಿದೆ.


ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ತನ್ನ ಯಾವುದೇ ಆಟಗಾರರನ್ನು ಬಿಟ್ಟುಕೊಡದೇ ಇರಲು ತೀರ್ಮಾನಿಸಿದೆ ಎಂದು ಸಿಇಒ ವಿಶ್ವನಾಥನ್ ಹೇಳಿದ್ದಾರೆ. ಸಿಎಸ್ ಕೆ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಬೇರೆ ತಂಡದಿಂದ ಆಟಗಾರರನ್ನು ಖರೀದಿ ಮಾಡಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಸಿಎಸ್ ಕೆ ಇದನ್ನು ನಿರಾಕರಿಸಿದೆ. ಇಮ್ರಾನ್ ತಾಹಿರ್ ರನ್ನು ಇದುವರೆಗೆ ಕಣಕ್ಕಿಳಿಸಿಲ್ಲ. ಹೀಗಾಗಿ ಅವರನ್ನು ಇನ್ನೊಂದು ತಂಡಕ್ಕೆ ನೀಡುವ ಉದ್ದೇಶ ಚೆನ್ನೈಗಿರಬಹುದು ಎಂದು ಎಲ್ಲರ ಊಹೆಯಾಗಿತ್ತು. ಆದರೆ ಇದನ್ನು ವಿಶ್ವನಾಥನ್ ನಿರಾಕರಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಆಡಬಹುದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ನಿಷೇಧಿಸಿ: ಕೆಎಲ್ ರಾಹುಲ್ ಆಗ್ರಹ!