ದುಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಜತೆ ವೈಮನಸ್ಯ ಹೊಂದಿದ್ದ ವಿರಾಟ್ ಕೊಹ್ಲಿ ಇಂದು ಅವರ ಬರ್ತ್ ಡೇ ದಿನ ಸರ್ಪ್ರೈಸ್ ಕೊಟ್ಟಿದ್ದಾರೆ.
ಬರ್ತ್ ಡೇ ದಿನ ಅನಿಲ್ ಕುಂಬ್ಳೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ‘ಹ್ಯಾಪೀ ಬರ್ತ್ ಡೇ ಅನಿಲ್ ಭಾಯ್’ ಎಂದು ವಿಶ್ ಮಾಡುವ ಮೂಲಕ ಕೊಹ್ಲಿ ಹಿಂದಿನ ವೈಮನಸ್ಯ ಮರೆತಿದ್ದಾರೆ. ಕೋಚ್ ಸ್ಥಾನದಿಂದ ಕೆಳಗಿಳಿದ ಮೇಲೆ ಅನಿಲ್ ಕುಂಬ್ಳೆ ವಿರಾಟ್-ಅನುಷ್ಕಾ ಮದುವೆ ರಿಸೆಪ್ಷನ್ ನಲ್ಲಿ ಪಾಲ್ಗೊಂಡಿದ್ದರು. ಅದು ಬಿಟ್ಟರೆ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಕುಂಬ್ಳೆಯನ್ನು ಅನ್ ಫಾಲೋ ಮಾಡಿಕೊಂಡು, ಭಾರತೀಯ ಕ್ರಿಕೆಟ್ ನ ದಿಗ್ಗಜರ ಬಗ್ಗೆ ಉಲ್ಲೇಖಿಸುವಾಗ ಬೇಕೆಂದೇ ಕುಂಬ್ಳೆ ಹೆಸರನ್ನು ಪ್ರಸ್ತಾಪಿಸದೇ ತಮ್ಮಿಬ್ಬರ ನಡುವೆ ವೈಮನಸ್ಯವಿದೆ ಎಂಬುದನ್ನು ಜಾಹೀರು ಮಾಡಿದ್ದರು. ಆದರೆ ಈಗ 50 ನೇ ಬರ್ತ್ ಡೇ ದಿನ ಎಲ್ಲವನ್ನೂ ಮರೆತು ವಿಶ್ ಮಾಡಿದ್ದಾರೆ.