Publish Date: Sat, 17 Oct 2020 (08:52 IST)
Updated Date: Sat, 17 Oct 2020 (08:56 IST)
ದುಬೈ: ಐಪಿಎಲ್ 13 ರ ಮಿಡ್ ಸೀಸನ್ ನಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ದಿನೇಶ್ ಕಾರ್ತಿಕ್ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ ರನ್ನು ನೇಮಿಸಲಾಗಿದೆ.
ಕೆಕೆಆರ್ ಸೋಲು ಮತ್ತು ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಕಾರ್ತಿಕ್ ಬದಲಿಗೆ ಮಾರ್ಗನ್ ರನ್ನು ನಾಯಕನಾಗಿ ನೇಮಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದರು. ಇದೀಗ ತಾವಾಗಿಯೇ ನಾಯಕತ್ವದಿಂದ ಹೊರಬಂದಿರುವ ಕಾರ್ತಿಕ್, ಮಾರ್ಗನ್ ಗೆ ಮುಂದಿನ ಜವಾಬ್ಧಾರಿ ವಹಿಸಿದ್ದಾರೆ. 2019 ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆಲುವು ಕೊಡಿಸಿರುವ ಮಾರ್ಗನ್ ನಾಯಕತ್ವದಲ್ಲಿ ಕೆಕೆಆರ್ ಮುಂದಿನ ಪಂದ್ಯಗಳನ್ನು ಆಡಲಿದೆ.