Publish Date: Tue, 20 Oct 2020 (09:02 IST)
Updated Date: Tue, 20 Oct 2020 (09:04 IST)
ದುಬೈ: ಐಪಿಎಲ್ 13 ರಲ್ಲಿ ರಾಜಸ್ಥಾನ್ ವಿರುದ್ಧದ ಪಂದ್ಯವನ್ನೂ 7 ವಿಕೆಟ್ ಗಳಿಂದ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ ಆಫ್ ಹಾದಿ ಬಹುತೇಕ ಬಂದ್ ಆಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ನಾಯಕ ಧೋನಿ 28 ಮತ್ತು ರವೀಂದ್ರ ಜಡೇಜಾ ಅಜೇಯ 35 ರನ್ ಗಳಿಸಿದರು. ಈ ಸುಲಭ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಮೂರು ವಿಕೆಟ್ ಗಳನ್ನು ಬಹುಬೇಗನೇ ಕಳೆದುಕೊಂಡಿತು. ಆದರೆ ನಂತರ ನಾಯಕ ಸ್ಟೀವ್ ಸ್ಮಿತ್ ಅಜೇಯ 26 ಮತ್ತು ಜೋಸ್ ಬಟ್ಲರ್ ಅಜೇಯ 70 ರನ್ ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. ಇದರಿಂದಾಗಿ ರಾಜಸ್ಥಾನ್ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ ಜಯ ಸಾಧಿಸಿತು. ಚೆನ್ನೈ 10 ಪಂದ್ಯಗಳಲ್ಲಿ 7 ಸೋಲು ಕಾಣುವುದರೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿರುವುದಲ್ಲದೆ, ಈ ಐಪಿಎಲ್ ಯಾತ್ರೆಯಲ್ಲಿ ಮುಂದುವರಿಯುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.