Publish Date: Mon, 19 Oct 2020 (09:13 IST)
Updated Date: Mon, 19 Oct 2020 (09:15 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಅಂಕಪಟ್ಟಿಯಲ್ಲಿ ಸುಧಾರಣೆ ಕಂಡು ಮಾನ ಉಳಿಸಿಕೊಳ್ಳುವ ಹವಣಿಕೆಯಲ್ಲಿರುವ ಸಿಎಸ್ ಕೆ ಇಂದು ರಾಜಸ್ಥಾನ್ ವಿರುದ್ಧದ ಪಂದ್ಯ ಉತ್ತಮ ಅವಕಾಶವಾಗಲಿದೆ. ಎರಡೂ ತಂಡಗಳೂ ಸಾಮರ್ಥ್ಯಕ್ಕೆ ತಕ್ಕ ಆಟವಾಡದೇ ಇರುವುದೇ ದೊಡ್ಡ ತಲೆನೋವಾಗಿದೆ. ಇದುವರೆಗೆ ಇದರಿಂದಲೇ ಎರಡೂ ತಂಡಗಳೂ ಸೋಲು ಕಾಣುತ್ತಿವೆ. ಹಳೆಯ ಹುಳುಕುಗಳನ್ನು ಸರಿಪಡಿಸಿಕೊಂಡು ಇಂದು ಯಾವ ರೀತಿಯ ಪ್ರದರ್ಶನ ನೀಡುತ್ತವೆ ಎಂದು ನೋಡಬೇಕಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.