Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ 13: ಆರ್ ಸಿಬಿಗೆ ಕನ್ನಡಿಗರಿಂದಲೇ ಕುತ್ತು!

webdunia
ಭಾನುವಾರ, 18 ಅಕ್ಟೋಬರ್ 2020 (09:40 IST)
ದುಬೈ: ಈ ಬಾರಿಯ ಐಪಿಎಲ್ ನಲ್ಲಿ ಬೇರೆ ಬೇರೆ ತಂಡದಲ್ಲಿರುವ ಕನ್ನಡಿಗರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕುತ್ತಾಗಿ ಪರಿಣಮಿಸುತ್ತಿದ್ದಾರೆ.


ಕಿಂಗ್ಸ್ ಇಲೆವೆನ್ ಪಂಜಾಬ್ ನಲ್ಲಿ ಕನ್ನಡಿಗರದ್ದೇ ನಾಯಕತ್ವ. ಈ ತಂಡದ ಎದುರು ಆಡಿದ ಎರಡೂ ಪಂದ್ಯವನ್ನು ಆರ್ ಸಿಬಿ ಸೋತಿದೆ. ಎರಡೂ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಎಕ್ಸ್ ಟ್ರಾ ಉತ್ಸಾಹದಿಂದ ಬ್ಯಾಟಿಂಗ್ ಮಾಡಿದ್ದರು. ಇನ್ನು, ನಿನ್ನೆ ನಡೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲೂ ಕರ್ನಾಟಕದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಮೈ ಮೇಲೆ ಭೂತ ಹೊಕ್ಕವರಂತೆ ಯದ್ವಾ ತದ್ವಾ ಬ್ಯಾಟ್ ಚಚ್ಚಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಎಕ್ಸ್ ಟ್ರಾ ಉತ್ಸಾಹದಲ್ಲಿದ್ದ ಉತ್ತಪ್ಪ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು.  ಹೀಗಾಗಿ ಈ ಐಪಿಎಲ್ ನಲ್ಲಿ ಮೊದಲು ಆರ್ ಸಿಬಿ ಪರ ಆಡಿದ್ದವರು, ಅಥವಾ ಕರ್ನಾಟಕ ಮೂಲದ ಆಟಗಾರರೇ ಕುತ್ತಾಗಿ ಪರಿಣಮಿಸುತ್ತಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಐಪಿಎಲ್ 13: ಜಡೇಜಾಗೆ ಅಂತಿಮ ಓವರ್ ಕೊಟ್ಟು ತಪ್ಪು ಮಾಡಿದ ಧೋನಿ