Publish Date: Mon, 19 Oct 2020 (09:29 IST)
Updated Date: Mon, 19 Oct 2020 (09:34 IST)
ದುಬೈ: ಐಪಿಎಲ್ 13 ರಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಕಾದಿದೆ. ಗಾಯಾಳುವಾಗಿರುವ ಪ್ರಮುಖ ಆಟಗಾರ ಡ್ವಾನ್ ಬ್ರಾವೋ ಈ ಐಪಿಎಲ್ ನಿಂದಲೇ ಹೊರ ನಡೆಯುವ ಸಾಧ‍್ಯತೆಯಿದೆ.
ತೊಡೆ ಸ್ನಾಯು ಸೆಳೆತಕ್ಕೊಳಗಾಗಿರುವ ಬ್ರಾವೋ ಸದ್ಯಕ್ಕೆ ಪಂದ್ಯವಾಡುವುದಿಲ್ಲ ಎಂದು ಕೋಚ್ ಫ್ಲೆಮಿಂಗ್ ಸುಳಿವು ನೀಡಿದ್ದಾರೆ. ಮುಂದಿನ ಎರಡು ಅಥವಾ ಮೂರು ವಾರ ಅವರು ಕಣಕ್ಕಿಳಿಯಲ್ಲ ಎಂದಿದ್ದಾರೆ. ಹೀಗಾಗಿ ಉಳಿದೆಲ್ಲಾ ಪಂದ್ಯಗಳಲ್ಲೂ ಅವರು ಭಾಗವಹಿಸುವುದು ಅನುಮಾನ. ಇದು ಚೆನ್ನೈಗೆ ತೀರಾ ಹಿನ್ನಡೆಯಾಗಲಿದೆ.