Publish Date: Thu, 30 Dec 2021 (10:30 IST)
Updated Date: Thu, 30 Dec 2021 (10:36 IST)
ಹೈದರಾಬಾದ್: ಸಿನಿಮಾ ರಂಗದ ದಿಗ್ಗಜರನ್ನೂ ಮಾನಸಿಕ ಖಿನ್ನತೆ ಬಿಟ್ಟಿಲ್ಲ. ಹಲವರು ನಟ-ನಟಿಯರು ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಇದೀಗ ತೆಲುಗಿನ ಸ್ಟಾರ್ ನಟ ಜ್ಯೂ.ಎನ್ ಟಿಆರ್ ಕೂಡಾ ಹಿಂದೊಮ್ಮೆ ಖಿನ್ನತೆಯಿಂದ ಬಳಲಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ.
2001 ರಲ್ಲಿ ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಜ್ಯೂ.ಎನ್ ಟಿಆರ್ ಬಳಿಕ ಹಲವು ಸೋಲು ಕಂಡರು. ಸಿನಿಮಾಗಳು ಸೋತಾಗ ನಟನಾಗಿ ಗೊಂದಲಕ್ಕೆ ಒಳಗಾದೆ. ಈ ವೇಳೆ ಡಿಪ್ರೆಷನ್ ಗೊಳಗಾದೆ.
ಖಿನ್ನತೆಗೊಳಗಾದ ಸಂದರ್ಭದಲ್ಲಿ ರಾಜಮೌಳಿ ಸಾಂತ್ವನ ಹೇಳಿದರು. ಅವರು ಆತ್ಮಾವಲೋಕನ ಮಾಡಿಕೊಳ್ಳಲು ಸಹಾಯ ಮಾಡಿದರು ಎಂದು ಜ್ಯೂ.ಎನ್ ಟಿಆರ್ ಹೇಳಿದ್ದಾರೆ.