Select Your Language

Notifications

webdunia
webdunia
webdunia
webdunia

ಬಿಪಿ, ಹೃದಯದ ಸಮಸ್ಯೆಗೆ ದ್ರಾಕ್ಷಿ ಹಣ್ಣಿನ ಜ್ಯೂಸ್ !

ಬಿಪಿ, ಹೃದಯದ ಸಮಸ್ಯೆಗೆ ದ್ರಾಕ್ಷಿ ಹಣ್ಣಿನ ಜ್ಯೂಸ್ !
ಬೆಂಗಳೂರು , ಬುಧವಾರ, 3 ನವೆಂಬರ್ 2021 (08:34 IST)
ದ್ರಾಕ್ಷಿ ಹಣ್ಣಿನ ಜ್ಯೂಸ್ ಸಾಧಾರಣವಾಗಿ ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಜನರ ಬಳಕೆಯಲ್ಲಿ ಇರುತ್ತದೆ ಎಂದು ಹೇಳಬಹುದು.
ಆದರೆ ಕೇವಲ ಇದು ಈ ಸಮಯಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಪ್ರತಿಯೊಬ್ಬರಿಗೂ ಪ್ರತಿಯೊಂದು ಸಮಯದಲ್ಲಿ ಕೂಡ ಕೆಲಸ ಮಾಡುತ್ತದೆ.
ಮಧುಮೇಹ ಮತ್ತು ಹೃದಯ ತೊಂದರೆ ಇದ್ದವರಿಗೆ ಇದು ರಾಮಬಾಣವಾಗಿ ಕೆಲಸ ಮಾಡಬಲ್ಲದು. ಈ ಲೇಖನದಲ್ಲಿ ದ್ರಾಕ್ಷಿಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಸಿಗುವಂತಹ ಆರೋಗ್ಯದ ಹಲವು ಲಾಭಗಳ ಬಗ್ಗೆ ತಿಳಿಸಿಕೊಡಲಾಗಿದೆ.
ಕೆಟ್ಟ ಕೊಲೆಸ್ಟ್ರಾಲ್ ಮುಕ್ತಿ
ನಮ್ಮ ದೇಹದ ರಕ್ತದ ಸಂಚಾರ ಶುದ್ಧವಾಗಿದ್ದರೆ, ಆರೋಗ್ಯದಲ್ಲಿ ನಮಗೆ ಯಾವುದೇ ತೊಂದರೆ ಇರುವುದಿಲ್ಲ. ಇಲ್ಲವೆಂದರೆ ಹೃದಯ ರಕ್ತ ನಾಳದ ಕಾಯಿಲೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ.
ರೋಗನಿರೋಧಕ ಶಕ್ತಿ
ಕೇವಲ ಒಂದು ಲೋಟ ಕಪ್ಪು ದ್ರಾಕ್ಷಿ ಹಣ್ಣುಗಳ ರಸ ದೇಹದ ರೋಗ ನಿರೋಧಕ ಶಕ್ತಿಯನ್ನು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರಿಗೂ ಹೆಚ್ಚು ಮಾಡುತ್ತದೆ.
ಅತಿಯಾದ ಪ್ಲೇಟ್ಲೆಟ್ ಗಳ ಒಟ್ಟುಗೂಡುವಿಕೆ ಹೃದಯ ರಕ್ತನಾಳಕ್ಕೆ ಯಾವುದೇ ಸಮಯದಲ್ಲಿ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದರ ನಿವಾರಣೆಯಲ್ಲಿ ಕಪ್ಪುದ್ರಾಕ್ಷಿ ಹಣ್ಣುಗಳ ರಸ ತುಂಬಾ ಪ್ರಯೋಜನಕಾರಿ.
ಮೆಟಬಾಲಿಸಂ ಪ್ರಕ್ರಿಯೆ
ಕೆಲವು ಜನರನ್ನು ಸಂಶೋಧನೆಗೆ ಗುರಿಪಡಿಸಿ ಅವರಿಗೆ ಕೆಂಪು ಬಣ್ಣದ ದ್ರಾಕ್ಷಿ ಹಣ್ಣುಗಳ ರಸ ಮತ್ತು ಕಪ್ಪು ಬಣ್ಣದ ದ್ರಾಕ್ಷಿಹಣ್ಣಿನ ರಸ ಸೇವನೆ ಮಾಡಲು ಹೇಳಿದರು. ಕೆಲವು ದಿನಗಳು ಕಳೆದ ನಂತರ ಆಶ್ಚರ್ಯಚಕಿತವಾದ ವರದಿ ಬಂದಿತ್ತು.
ರಕ್ತದ ಒತ್ತಡ ನಿಯಂತ್ರಣ
ದ್ರಾಕ್ಷಿ ಹಣ್ಣಿನ ರಸದಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ದುರ್ಬಲವಾಗಿರುವ ಹೃದಯದ ಮಾಂಸಖಂಡಗಳಿಗೆ ಶಕ್ತಿ ನೀಡಿ ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು ಅಭಿವೃದ್ಧಿ ಮಾಡುತ್ತವೆ. ಇದರಿಂದ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ.
ದೇಹದ ತೂಕ ನಿಯಂತ್ರಣ
ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಇತ್ತೀಚಿನ ಜನರಿಗೆ ತುಂಬಾ ಪ್ರಯಾಸದ ಕೆಲಸವಾಗಿದೆ. ಆದರೆ ತಾವು ಮಾಡುವ ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯನ್ನು ಸರಿಯಾಗಿ ನಿರ್ವಹಿಸಿಕೊಂಡರೆ ಇದು ಕ್ರಮೇಣ ಸಾಧ್ಯವಾಗುತ್ತದೆ ಎಂದು ಹೇಳಬಹುದು.
ವ್ಯಾಯಾಮ ಮಾಡಿದ ನಂತರ ಒಂದು ಲೋಟ ದ್ರಾಕ್ಷಿ ಹಣ್ಣಿನ ರಸವನ್ನು ಪ್ರತಿ ದಿನ ಕುಡಿಯುವುದರಿಂದ ಸೊಂಟದ ಭಾಗದಲ್ಲಿರುವ ಬೊಜ್ಜು ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚುವುದೇ? ಪರಿಹಾರ ಇಲ್ಲಿದೆ