Select Your Language

Notifications

webdunia
webdunia
webdunia
webdunia

ನಿಂಬು ಶುಂಠಿ ರಸಂ ಅನ್ನಕ್ಕೆ ಬೆಸ್ಟ್! ಟ್ರೈ ಮಾಡಿ

ನಿಂಬು ಶುಂಠಿ ರಸಂ ಅನ್ನಕ್ಕೆ ಬೆಸ್ಟ್! ಟ್ರೈ ಮಾಡಿ
ಮೈಸೂರು , ಮಂಗಳವಾರ, 2 ನವೆಂಬರ್ 2021 (16:38 IST)
ಮಳೆಗಾಲದ ಈ ಚಳಿಗೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ನಿಂಬು ಮತ್ತು ಶುಂಠಿ ಮಿಶ್ರಿತ ರಸಮ್ ಸಹಾಯ ಮಾಡುವುದು.
ಹುಳಿ, ಸಿಹಿ ಮತ್ತು ಖಾರದ ಮಿಶ್ರಣದಲ್ಲಿ ತಯಾರಿಸಲಾಗುವ ಈ ರಸಮ್ ಅನ್ನು ಅನ್ನದ ಜೊತೆ ಸವಿಯಬಹುದು. ಇಲ್ಲವೇ ನೀವು ಬಯಸುವುದಾದರೆ ಬಿಸಿಬಿಸಿ ಇರುವಾಗ ಕಷಯಾಯದ ರೂಪದಲ್ಲಿಯೂ ಕುಡಿಯಬಹುದು. ಗಂಟಲ ಕೆರತ ಅಥವಾ ಶೀತದ ಸಮಸ್ಯೆ ಇದ್ದರೆ ಒಳ್ಳೆಯ ಉಪಶಮನ ದೊರೆಯುವುದು. ಸುಲಭ ಹಾಗೂ ಸರಳ ವಿಧಾನದಲ್ಲಿ ಹೇಗೆ ತಯಾರಿಸುವುದು ಎನ್ನುವುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.
 ಬೇಕಾಗುವ ಸಾಮಗ್ರಿಗಳು
•2 ಕಪ್ ಮಸೂರ್ ದಾಲ್
•2 ಚಮಚ ತುಪ್ಪ
•ಅಗತ್ಯಕ್ಕೆ ತಕ್ಕಷ್ಟು ಸಾಸಿವೆ
•1 ಚಮಚ ಜೀರಿಗೆೆ
•1 ಚಮಚ ಕರಿಮೆಣಸು
•1 - ನಿಂಬೆಹಣ್ಣು
•1 - ಟೊಮೆಟೋ
•3 ಇಂಚುಗಳು ಶುಂಠಿ
•6 - ಹಸಿಮೆಣಸಿನಕಾಯಿ
•ಅಗತ್ಯಕ್ಕೆ ತಕ್ಕಷ್ಟು ಕರಿಬೇವು
•ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
•1/2 ಚಮಚ ಉಪ್ಪು
ಮೊದಲಿಗೆ ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ಕುಕ್ಕರ್ ಪಾತ್ರೆಗೆ ಸೇರಿಸಿ.- ನಂತರ ಸ್ವಲ್ಪ ನೀರು ಮತ್ತು ಅರಿಶಿನ ಸೇರಿಸಿ ಮುಚ್ಚಳವನ್ನು ಮುಚ್ಚಿ.- 5-6 ಸೀಟಿ ಕೂಗಿಸಿಕೊಂಡು ಮೃದುವಾಗಿ ಬೇಯಿಸಿಕೊಳ್ಳಬೇಕು.
•ರುಚಿ ರುಚಿಯಾದ ಸ್ನ್ಯಾಕ್ಸ್ ಪನ್ನೀರ್-ಚೀಸ್ ಬನ್ಸ್ ರೆಸಿಪಿ
•ಗೋಧಿಹಿಟ್ಟಿನ ಗಾಖರ್ ಟೇಸ್ಟ್ ಮಾಡಿದ್ದೀರಾ?
•ಸಿಹಿ ಚಂದ್ರಹಾರ ಮಾಡುವ ವಿಧಾನ
- ಪ್ರತ್ಯೇಕ ಬಾಣಲೆಯಲ್ಲಿ ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ಒಣ ರೂಪದಲ್ಲಿಯೇ ಹುರಿಯಬೇಕು.- ನಂತರ ಒರಟಾಗಿ ರುಬ್ಬಿಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ.- ನಂತರ ಹೆಚ್ಚಿಕೊಂಡ ಶುಂಠಿ ಚೂರು, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ ಸೇರಿಸಿ ಹುರಿಯಿರಿ.
- ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ, 2-3 ನಿಮಿಷಗಳ ಕಾಲ ಬೇಯಿಸಿ.- ಟೊಮ್ಯಾಟೋ ಚೆನ್ನಾಗಿ ಬೆಂದ ನಂತರ ಬೇಯಿಸಿಕೊಂಡ ತೊಗರಿ ಬೇಳೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಒರಟಾಗಿ ರುಬ್ಬಿಕೊಂಡ ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 4-5 ನಿಮಿಷಗಳ ಕಾಲ ಕುದಿಸಿ.- ಕುದಿ ಬಂದ ಬಳಿಕ ಉರಿಯನ್ನು ಆರಿಸಿ, ನಿಂಬೆ ರಸವನ್ನು ಸೇರಿಸಿ.
- ಸಿದ್ಧವಾದ ನಿಂಬು ಮತ್ತು ಶುಂಠಿ ರಸದ ರಸಮ್ಅನ್ನು ರಾಗಿ ಮುದ್ದೆ, ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಿಯುತ ತ್ವಚೆಯ ರಹತ್ಯ!