Publish Date: Thu, 30 Dec 2021 (09:20 IST)
Updated Date: Thu, 30 Dec 2021 (09:31 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 12 ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಹಾಗೆಯೇ ಇದೆ.
ವಂಶವೃಕ್ಷ ಮೂಲಕ ಚಿತ್ರರಂಗಕ್ಕೆ ಬಂದ ಸಂಪತ್ ಕುಮಾರ್ ಬಳಿಕ ನಾಗರಹಾವಿನ ಮೂಲಕ ವಿಷ್ಣುವರ್ಧನ್ ಆಗಿ ತೆರೆ ಮೇಲೆ ಮಿಂಚಿ ಸಾಹಸಸಿಂಹನಾಗಿ ಮೆರೆದರು. ತೆರೆ ಮೇಲೆ ಮಾತ್ರವಲ್ಲ, ತೆರೆಯ ಹಿಂದೆಯೂ ಅವರ ಆದರ್ಶಗಳು, ಯಾರಿಗೂ ಗೊತ್ತಾಗದಂತೆ ಮಾಡುತ್ತಿದ್ದ ಸಮಾಜಸೇವೆಗಳು ಅಭಿಮಾನಿಗಳಿಗೆ ಆದರ್ಶ.
ಇಂದು ವಿಷ್ಣುವರ್ಧನ್ ಅಗಲಿ 12 ವರ್ಷಗಳಾಗಿದ್ದು, ಈ ದಿನ ಕುಟುಂಬ ವರ್ಗ ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಸಮಾಧಿ ಬಳಿ ಪೂಜೆ ಸಲ್ಲಿಸಲಿದೆ. ಅಭಿಮಾನಿಗಳೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.