Publish Date: Thu, 30 Dec 2021 (08:50 IST)
Updated Date: Thu, 30 Dec 2021 (09:10 IST)
ಬೆಂಗಳೂರು: ಒಂದೇ ದಿನ ಎರಡು-ಮೂರು ಸಿನಿಮಾಗಳು ರಿಲೀಸ್ ಆಗುತ್ತಿರುವುದು ಚಿತ್ರ ನಿರ್ಮಾಪಕರಿಗೆ ಈಗ ಗಳಿಕೆಯ ಸಂಕಷ್ಟ ಎದುರಾಗಿದೆ.
ಒಂದೆಡೆ ಹಲವು ಸಿನಿಮಾಗಳು ರಿಲೀಸ್ ಆಗುವ ಭಯವಾದರೆ ಇನ್ನೊಂದೆಡೆ ಪರಭಾಷೆ ಚಿತ್ರಗಳ ಹಾವಳಿ. ಇದೆಲ್ಲದರಿಂದಾಗಿ ಚಿತ್ರಮಂದಿರಗಳ ಕೊರತೆಯೂ ಆಗುತ್ತಿದೆ. ಇದು ಚಿತ್ರನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ.
ಹೀಗಾಗಿ ಇತ್ತೀಚೆಗೆ ಕೆಲವು ಸಿನಿಮಾಗಳ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ. ಅವತಾರ ಪುರುಷ, ಒಂಭತ್ತನೇ ದಿಕ್ಕು, ಚಾರ್ಲಿ 777 ಇದಕ್ಕೆ ಉದಾಹರಣೆಗಳು. ಲಾಕ್ ಡೌನ್ ಬಳಿಕ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಟ್ಟ ಬೆನ್ನಲ್ಲೇ ಈ ಸಮಸ್ಯೆಗಳು ಕಾಡಿರಲಿಲ್ಲ. ಆದರೆ ಈಗ ವೀಕೆಂಡ್ ರಜೆಗಳು, ಕ್ರಿಸ್ ಮಸ್, ಹೊಸವರ್ಷದ ದಿನಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಆತುರವಿದೆ. ಇದರಿಂದಾಗಿ ಒಂದೇ ದಿನ ಬಹುನಿರೀಕ್ಷಿತ ಎರಡು-ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದು ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.