Publish Date: Mon, 27 Dec 2021 (19:05 IST)
Updated Date: Mon, 27 Dec 2021 (19:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ಮೆಚ್ಚಿನ ಹುಡುಗನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಎಂಗೇಜ್ ಮೆಂಟ್ ವಿಚಾರವನ್ನು ಅದಿತಿ ಹಂಚಿಕೊಂಡಿದ್ದಾರೆ. ಅದಿತಿ ಇಂತಹದ್ದೊಂದು ಸಿಹಿ ಸುದ್ದಿ ಪ್ರಕಟಿಸುತ್ತಿದ್ದಂತೇ ನೆಟ್ಟಿಗರು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ಮೂಲಗಳ ಪ್ರಕಾರ ಅದಿತಿ ದಾವಣಗೆರೆ ಮೂಲದ ಉದ್ಯಮಿಯನ್ನು ವರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ.