Publish Date: Mon, 27 Dec 2021 (19:25 IST)
Updated Date: Mon, 27 Dec 2021 (19:28 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ನಾಯಕರಾಗಿರುವ ರೈಡರ್ ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸೋರಿಕೆಯಾಗಿತ್ತು.
ತಮಿಳು ರಾಕರ್ಸ್ ಸಿನಿಮಾವನ್ನು ಸೋರಿಕೆ ಮಾಡಿತ್ತು. ಇದರಿಂದಾಗಿ ಚಿತ್ರದ ಗಳಿಕೆಗೆ ಭಾರೀ ಹೊಡೆತವಾಗಿತ್ತು. ಇದೀಗ ನಿರ್ಮಾಪಕ ಲಹರಿ ವೇಣು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಹರಿ ವೇಲು ನಮ್ಮ ರೈಡರ್ ಸಿನಿಮಾ ಪೈರಸಿಯಾಗಿದೆ. ಪೈರಸಿ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಲಹರಿ ವೇಣು ಈ ವೇಳೆ ಆಗ್ರಹಿಸಿದ್ದಾರೆ.