ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ಸುದೀಪ್ ಅಭಿನಯದ ಕೋಟಿಗೊಬ್ಬ-3 ತಾಂತ್ರಿಕ ದೋಷದಿಂದ ಅಂದುಕೊಂಡ ದಿನ ರಿಲೀಸ್ ಆಗಿರಲಿಲ್ಲ. ಈ ಬಗ್ಗೆ ರಾಜ್ಯಾದ್ಯಂತ ಸುದೀಪ್ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೊನೆಗೆ ಮಾರನೆಯ ದಿನ ಅದರ ರಿಲೀಸ್ ಆಯಿತು ನಿಜ. ಆದರೆ ಇದರ ವಿವಾದ ಮಾತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮೊದಲಿಗೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ತಮಗೆ ಅನ್ಯಾಯ ಆಗಿರುವ ಬಗ್ಗೆ ಹೇಳಿದ್ದರು. ಆದರೆ ಇದೀಗ ಫಿಲಂ ವಿತರಕರು ಸೂರಪ್ಪ ಬಾಬು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಕುರಿತು ಚಿತ್ರ ವಿತರಕ ಖಾಜಾಪೀರ್ ಚಿತ್ರದುರ್ಗದಲ್ಲಿ ದೂರು ದಾಖಲು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂರಪ್ಪ ಬಾಬು ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದರ ನಡುವೆ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಪ್ರವೇಶ ಮಾಡಿದ್ದು, ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗಿರುವ ವಿಚಾರ ಆರೋಗ್ಯಕರವಲ್ಲ. ಇದರಿಂದ ಕನ್ನಡ ಇಂಡಸ್ಟ್ರಿ ಮರ್ಯಾದೆ ಹೋಗುತ್ತದೆ. ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ನಮ್ಮ ಚಿತ್ರರಂಗದ ಮರ್ಯಾದೆ ಹೊರಗಡೆಯವರು ತೆಗೆಯುವಂತಾಗಬಾರದು ಎಂದಿದ್ದಾರೆ.