Publish Date: Fri, 24 Sep 2021 (16:39 IST)
Updated Date: Fri, 24 Sep 2021 (16:43 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗೆ ಗಂಡು ಮಗುವಾಗಿದೆ. ಈ ಮೂಲಕ ಈ ಹಿಂದೆ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಿಜವಾಗಿದೆ.
ರೇವತಿ ಗರ್ಭಿಣಿಯಾಗಿದ್ದಾಗ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ವಿನಯ್ ಗುರೂಜಿ ಗೌಡರ ಮನೆಗೆ ಗಂಡು ಮಗುವಿನ ಆಗಮನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ.
ಅದರ ಜೊತೆಗೆ ಮಗುವಿನ ಆಗಮನದ ಬಳಿಕ ನಿಖಿಲ್ ರಾಜಕೀಯ ಭವಿಷ್ಯವೂ ಉಜ್ವಲವಾಗಲಿದೆ ಎಂದಿದ್ದರು. ಅದೂ ನಿಜವಾಗುತ್ತದೆಯೇ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.