Publish Date: Fri, 24 Sep 2021 (16:34 IST)
Updated Date: Fri, 24 Sep 2021 (16:35 IST)
ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮನೆಯಲ್ಲೀಗ ಸಂಭ್ರಮದ ವಾತಾವರಣ. ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿಗೆ ಗಂಡು ಮಗುವಿನ ಜನನವಾಗಿದೆ.
ಇಂದು ರೇವತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ನಿಖಿಲ್ ಕುಮಾರಸ್ವಾಮಿ, ಎಚ್ ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಇನ್ನೊಂದು ಶುಭ ಗಳಿಗೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇನ್ನು, ತಮ್ಮ ಮರಿ ಮೊಮ್ಮಗನನ್ನು ನೋಡಲು ಎಚ್ ಡಿ ದೇವೇಗೌಡ-ಚಿನ್ನಮ್ಮ ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಗುವನ್ನು ಎತ್ತಿ ಸಂಭ್ರಮಿಸಿದ ಕ್ಷಣಗಳನ್ನು ನಿಖಿಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.