ಬೆಂಗಳೂರು: ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಡಬ್ ಮಾಡಲು ಸಮಯವಿಲ್ಲ ಎಂಬ ಹೇಳಿಕೆ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
									
			
			 
 			
 
 			
			                     
							
							
			        							
								
																	ರಶ್ಮಿಕಾ ಪುಷ್ಪ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಡಬ್ ಮಾಡಲು ಸಮಯವಿರಲಿಲ್ಲ ಎಂದಿದ್ದರು. ರಶ್ಮಿಕಾ ಈ ರೀತಿ ಹೇಳಿಕೆ ನೀಡಿ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದರು.
									
										
								
																	ಇದೀಗ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡ ಸಂಘಟನೆಗಳು ರಶ್ಮಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಬೆಳೆಯಲು ಕನ್ನಡ ಬೇಕು. ಬೆಳೆದ ಮೇಲೆ ಡಬ್ ಮಾಡಲು ಸಮಯವಿಲ್ಲ ಅಂತಾರೆ ಎಂದು ರಶ್ಮಿಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.