Select Your Language

Notifications

webdunia
webdunia
webdunia
webdunia

ಸೌಂದರ್ಯದ ಗುಟ್ಟು ಕ್ಯಾರೇಟ್‍ನಲ್ಲಿ ರಟ್ಟು!

ಸೌಂದರ್ಯದ ಗುಟ್ಟು ಕ್ಯಾರೇಟ್‍ನಲ್ಲಿ ರಟ್ಟು!
ಬೆಂಗಳೂರು , ಬುಧವಾರ, 27 ಅಕ್ಟೋಬರ್ 2021 (13:18 IST)
ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಣ್ಣು, ಚರ್ಮದ ಆರೋಗ್ಯ ಸುರಕ್ಷತೆಗೆ ಇದು ಒಳ್ಳೆಯದು.
ಹಾಗಿರುವಾಗ ವಾರಕ್ಕೆ ಎರಡು ದಿನವಾದರೂ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.
ಕ್ಯಾರೆಟ್ ಜ್ಯೂಸ್ನಲ್ಲಿ ವಿಟಮಿನ್ ಸಿ ಮತ್ತು ಕೆ ಅಂಶ ಅಧಿಕವಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕವನ್ನು ನೀಡುತ್ತದೆ. ಹಾಗಿರುವಾಗ ನಿಮ್ಮ ಸಂಪೂರ್ಣ ಆರೋಗ್ಯ ಸುರಕ್ಷತೆಗೆ ಬೇಕಾಗಿರುವ ಪೋಷಕಾಂಶವನ್ನು ನೀಡುವ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.
ಕಣ್ಣುಗಳ ಆರೋಗ್ಯ ಸುಧಾರಣೆ
webdunia

ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅತ್ಯಗತ್ಯ. ವಿಟಮಿನ್ ಎ ಅಂಶದಿಂದ ನಮಗೆ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್ ಎ ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕ್ಯಾರೆಟ್ ಜ್ಯೂಸ್ನಲ್ಲಿ ಕಂಡುಬರುವ ವಿಟಮಿನ್ ಎ ಮತ್ತು ಸಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇವೆರಡೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ಬೇಕಾಗುವ ಅಂಶಗಳು.
ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ
webdunia

ಕೆಲವು ಅಧ್ಯಯನಗಳಿಂದ ಕ್ಯಾರೆಟ್ನಲ್ಲಿ ಕ್ಯಾನ್ಸರ್ ತಡೆಗಟ್ಟುವ ಕೆಲವು ಅಂಶಗಳಿವೆ ಎಂಬುದು ತಿಳಿದು ಬಂದಿದೆ. ಕ್ಯಾರೆಟ್ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತದೆ. ಇದು ಕ್ಯಾನ್ಸರ್ ಕೋಶಗಳನ್ನು ತಡೆಯುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ
webdunia

ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಕ್ಯಾರೆಟ್ ಜ್ಯೂಸ್ ಒಳ್ಳೆಯದು. ದೇಹಕ್ಕೆ ಸುಸ್ತು, ಆಯಾಸ, ಅಸ್ವಸ್ಥತೆಯ ಸಮಸ್ಯೆ ಉಂಟಾಗುತ್ತಿದ್ದರೆ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
webdunia

ಕ್ಯಾರೆಟ್ ಜ್ಯೂಸ್ ವಿಟಮಿನ್ ಸಿ ಅಂಶವನ್ನು ಒದಗಿಸುತ್ತದೆ. ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಹಾನಿಗೊಳಗಾಗದಂತೆ ರಕ್ಷಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ನಿದ್ದೆಗೆ ರಾಮಬಾಣ ಹಾಲು! ತಪ್ಪದೇ ಟ್ರೈ ಮಾಡಿ