Select Your Language

Notifications

webdunia
webdunia
webdunia
webdunia

ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಎಡವಟ್ಟು: ಜ್ಯೂ. ಎನ್ ಟಿಆರ್ ಗೆ ಗಾಯ

ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಎಡವಟ್ಟು: ಜ್ಯೂ. ಎನ್ ಟಿಆರ್ ಗೆ ಗಾಯ
ಹೈದರಾಬಾದ್ , ಶುಕ್ರವಾರ, 5 ನವೆಂಬರ್ 2021 (16:57 IST)
ಹೈದರಾಬಾದ್: ಇತ್ತೀಚೆಗಷ್ಟೇ ಜಿಮ್ ಮುಗಿಸಿದಾಗ ಎದೆನೋವು ಬಂದು ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ್ದು ಇಡೀ ಚಿತ್ರರಂಗವನ್ನೇ ಶಾಕ್ ಗೆ ಗುರಿ ಮಾಡಿತ್ತು. ಇದೀಗ ತೆಲುಗು ನಟ ಜ್ಯೂ. ಎನ್ ಟಿಆರ್ ಜಿಮ್ ನಲ್ಲಿ ಎಡವಟ್ಟು ಮಾಡಿಕೊಂಡಿರುವ ಸುದ್ದಿ ಬಂದಿದೆ.

ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಜ್ಯೂ.ಎನ್ ಟಿಆರ್ ಬಿದ್ದು ಕೈಗೆ ಪೆಟ್ಟುಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಅದಕ್ಕೆ ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಮಕ್ಕಳೊಂದಿಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಗ ಅವರ ಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಜೊತೆ ಕೊನೆಯದಾಗಿ ಟ್ರೀಟ್ ಮಾಡಿದ ವೈದ್ಯರಿಗೆ ಬೆದರಿಕೆ