Select Your Language

Notifications

webdunia
webdunia
webdunia
webdunia

ಕಿತ್ತಳೆ ಜ್ಯೂಸ್ ಉರಿಯೂತ ಸಮಸ್ಯೆಗೆ ಸಹಾಯಕ

ಕಿತ್ತಳೆ ಜ್ಯೂಸ್ ಉರಿಯೂತ ಸಮಸ್ಯೆಗೆ ಸಹಾಯಕ
ಬೆಂಗಳೂರು , ಗುರುವಾರ, 21 ಅಕ್ಟೋಬರ್ 2021 (14:42 IST)
ಒಂದು ಗ್ಲಾಸ್ ಆರೆಂಜ್ ಜ್ಯೂಸ್ ಆ ದಿನ ಪೂರ್ತಿ ಚಟುವಟಿಕೆಯಿಂದ ಕೂಡಿರಲು ಬೇಕಾದ ಶಕ್ತಿಯನ್ನು ನಿಮ್ಮಲ್ಲಿ ತುಂಬುತ್ತದೆ. ಈಗ ತಾನೇ ಹಿಂಡಿ ತೆಗೆದ ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ.

ಪ್ರತಿಶತ 100ರಷ್ಟು ಅಂದರೆ ಒಂದು ಗ್ಲಾಸ್ನಷ್ಟು ಕಿತ್ತಳೆ ರಸದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ.
ಒಂದು ಗ್ಲಾಸ್ ಕಿತ್ತಳೆ ರಸವನ್ನು ಕುಡಿಯುವುದು ಆರೋಗ್ಯಕರ ಮತ್ತು ವಯಸ್ಕರಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ರಸವು ದೀರ್ಘಕಾಲದ ಉರಿಯೂತ ಸಮಸ್ಯೆಗೆ ಪರಿಹಾರ ಜತೆಗೆ ಹೃದಯ ಸಂಬಂಧಿತ ಖಾಯಿಲೆ ಮತ್ತು ಮಧುಮೇಹ ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ನೀಡುತ್ತದೆ ಈ ಕುರಿತಂತೆ ಅಡ್ವಾನ್ಸ್ ಇನ್ ನ್ಯೂಟ್ರಿಷಿಯನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಕಿತ್ತಳೆ ರಸವು ವಿಟಮಿನ್ ಸಿ ಯಂತಹ ಪೋಷಕಾಂಶಗಳನ್ನು ಹೊಂದಿದೆ. ಜತೆಗೆ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಫ್ಲೋರಿಡಾ ಸಿಟ್ರಸ್ ನ ಆಹಾರ ತಜ್ಞರಾದ ಗೇಲ್ ರಾಂಪರ್ಸೌಡ್ ಹೇಳಿದ್ದಾರೆ.
webdunia

ಕಿತ್ತಳೆರಸದಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಇನ್ನೂ ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಹೆಚ್ಚಿನ ಅಧ್ಯಯನಗಳು ಬೇಕು ಎಂದು ತಜ್ಞರಾದ ಗೇಲ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್ನಲ್ಲಿ ಉಲ್ಲೇಖಿಸಲಾಗಿದೆ.
ಅಧ್ಯಯನ ಪ್ರಕಾರ ಒಂದು ಗ್ಲಾಸ್ ಕಿತ್ತಳೆ ರಸವು ಉರಿಯೂತದ ಸಮಸ್ಯೆಯನ್ನು ಪರಿಹರಿಸುತ್ತದೆ. ಜತೆಗೆ ಇದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪಡಿಣಾಮಗಳಿಲ್ಲ. ಅಧ್ಯಯನದಲ್ಲಿ ಮೂರು ರೀತಿಯ ವಿಶ್ಲೇಷಣಾ ವಿಭಾಗಗಳನ್ನು ಮಾಡಲಾಗಿದ್ದು, ಆರೋಗ್ಯವಂತ ವಯಸ್ಕರು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿದ್ದ ವಯಸ್ಕರು ಜತೆಗೆ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಸಿಲುಕಿರುವ ವಯಸ್ಕರೊಂದಿಗೆ ಅಧ್ಯಯನ ನಡೆಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಲೋಂಜಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ