Select Your Language

Notifications

webdunia
webdunia
webdunia
webdunia

ಸೌಂದರ್ಯದಲ್ಲಿ ಕಡಲೆ ಹಿಟ್ಟಿನ ಪ್ರಯೋಜನಗಳಾವುವು ಗೊತ್ತಾ..?

ಸೌಂದರ್ಯದಲ್ಲಿ ಕಡಲೆ ಹಿಟ್ಟಿನ ಪ್ರಯೋಜನಗಳಾವುವು ಗೊತ್ತಾ..?
ಬೆಂಗಳೂರು , ಬುಧವಾರ, 20 ಅಕ್ಟೋಬರ್ 2021 (13:32 IST)
ಅಡುಗೆಯಿಂದ ಹಿಡಿದು ಸೌಂದರ್ಯದವರೆಗೆ ಇದರ ಪ್ರಯೋಜನವಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶವಿದೆ. ಹಿಂದಿನಿಂದಲೂ ಇದರ ಬಳಕೆ ಇದೆ.

ಹೃದಯದ ಆರೋಗ್ಯಕ್ಕೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದಕ್ಕೆ ಕೂಡ ಇದು ಸಹಾಯಕಾರಿಯಂತೆ. ದೇಹದ ಆರೋಗ್ಯಕ್ಕೆ ಕಡಲೆ ಹಿಟ್ಟಿನ ಪ್ರಯೋಜನಗಳೆನು ಎಂಬುದನ್ನು ತಿಳಿಯೋಣ .
ಕಡಲೇ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವಿಸುವುದರಿಂದ ಮಧುಮೇಹ ಕೂಡ ನಿಯಂತ್ರಿಸಬಹುದಂತೆ. ಕಡಲೇ ಹಿಟ್ಟಿನಿಂದ ರೋಟಿ, ಪರಾಟ ಕೂಡ ಮಾಡಬಹುದು. ಗೋಧಿ ಹಿಟ್ಟಿನ ಬದಲು ಇದನ್ನು ಉಪಯೋಗಿಸಬಹುದು.
webdunia

ಇದರಲ್ಲಿ ನಾರಿನಾಂಶ ಜಾಸ್ತಿ ಇದೆ. ಕಡಲೇಹಿಟ್ಟಿನಿಂದ ಮಾಡಿದ ಆಹಾರ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಇನ್ನು ತೂಕ ಇಳಿಸಿಕೊಳ್ಳುವವರಿಗೆ ಕೂಡ ಕಡಲೇಹಿಟ್ಟು ವರದಾನವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದೆ. ಪ್ರೋಟಿನ್ ಹೇರಳವಾಗಿದೆ. ವರ್ಕ್ ಔಟ್ ನಂತರ ಇದರಿಂದ ಮಾಡಿದ ಸ್ಮೂಥಿಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
webdunia

ಇನ್ನು ಸೋಪು, ಫೇಸ್ ವಾಶ್ ಬದಲು ಕಡಲೇ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಮೊಡವೆ, ಕಲೆ ಚುಕ್ಕಿಗಳ ಸಮಸ್ಯೆಯಿಂದ ಪಾರಾಗಬಹುದು. ಆಗಾಗ ಮುಖಕ್ಕೆ ಕಡಲೇ ಹಿಟ್ಟಿನ ಪ್ಯಾಕ್ ಹಚ್ಚಿಕೊಳ್ಳುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.
ಇನ್ನು ಕಡಲೇಹಿಟ್ಟಿಗೆ ಮೊಟ್ಟೆ, ಎಸೆನ್ಸಿಯಲ್ ಆಯಿಲ್, ಸ್ವಲ್ಪ ಹಾಲು ಸೇರಿಸಿ ಮಿಶ್ರಣ ಮಾಡಿಕೊಂಡು ಇದನ್ನು ಹೇರ್ ಪ್ಯಾಕ್ ರೀತಿ ಹಚ್ಚಿಕೊಂಡರೆ ಹೊಳೆಯುವ ಕೂದಲು ನಿಮ್ಮದಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಗು ನೀರು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ