Select Your Language

Notifications

webdunia
webdunia
webdunia
webdunia

ಕಲೋಂಜಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

ಕಲೋಂಜಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ
ಬೆಂಗಳೂರು , ಗುರುವಾರ, 21 ಅಕ್ಟೋಬರ್ 2021 (14:03 IST)
ಕಪ್ಪು ಜೀರಿಗೆ  ಎಂದು ಕರೆಯಲ್ಪಡುವ ಕಲೋಂಜಿ ಹೂವಿನ ಗಿಡಗಳು ಬಟರ್ಕಪ್ ಕುಟುಂಬಕ್ಕೆ ಸೇರಿದೆ. ಇದು ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ಉತ್ಪಾದಿಸುತ್ತದೆ,ಇದನ್ನು ಅನೇಕ ಆಹಾರಗಳಲ್ಲಿ ಸುವಾಸನೆಯ ಮಸಾಲೆಯಾಗಿ ಬಳಸಲಾಗುತ್ತದೆ.

ಅದರ ಅಡುಗೆಯ ಬಳಕೆಯ ಜೊತೆಗೆ, ಕಲೋಂಜಿ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಇದನ್ನೂ  ಹಲವಾರು ವರ್ಷಗಳಿಂದ ಔಷಧೀಯ ಗುಣಗಳಿಗಾಗಿ ಬಳಕೆ ಮಾಡಲಾಗುತ್ತಿದೆ.
ಕಲೋಂಜಿ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ
ಆ್ಯಂಟಿ ಆಕ್ಸಿಡೆಂಟ್ಗಳು ಆರೋಗ್ಯ ಮತ್ತು ದೀರ್ಘ ಕಾಲದಿಂದ ಕಾಡುವ ರೋಗಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಸ್ವಲ್ಪ ಕೊಲೆಸ್ಟ್ರಾಲ್ ಅಗತ್ಯವಿದ್ದರೂ, ಹೆಚ್ಚಿನ ಹೃದ್ರೋಗ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಲೋಂಜಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ವಿಶೇಷವಾಗಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕಲೋಂಜಿಯನ್ನು ಬಳಕೆ  ಮಾಡುವುದು ಕೆಟ್ಟ ಅಥವಾ ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ರಕ್ತ ಟ್ರೈಗ್ಲಿಸರೈಡ್ಗಳಲ್ಲಿ ಗಮನಾರ್ಹ ಇಳಿಕೆಗೆ ಸಹಾಯ ಮಾಡುತ್ತದೆ.
ಕಲೋಂಜಿ ಎಣ್ಣೆಯು ಕಲೋಂಜಿ ಬೀಜದ ಪುಡಿಗಿಂತ ಹೆಚ್ಚಿನ ಪರಿಣಾಮವನ್ನು ಹೊಂದಿದೆ ಎಂದು ಸಾಬೀತಾಗಿದೆ. ಈ ಬೀಜದ ಪುಡಿ ಮಾತ್ರ ಉತ್ತಮ ಎಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ.  ಮಧುಮೇಹ ಹೊಂದಿರುವ 57 ಜನರನ್ನು ಬಳಸಿ ನಡೆಸಿದ  ಮತ್ತೊಂದು ಅಧ್ಯಯನವು ಒಂದು ವರ್ಷ ಕಾಲೊಂಜಿಯನ್ನು ಬಳಕೆ ಮಾಡುವುದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂಬುದನ್ನ ಸಾಬೀತು ಮಾಡಿದೆ.
ಕೆಲವು ಅಧ್ಯಯನಗಳ ಪ್ರಕಾರ ಆ್ಯಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯ ಸೇರಿದಂತೆ ಹಲವಾರು ರೀತಿಯ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ರಕ್ಷಿಸಬಹುದು ಎಂದು ಹೇಳಲಾಗುತ್ತದೆ.  ಕಲೋಂಜಿಯಲ್ಲಿ ಕಂಡುಬರುವ ಹಲವಾರು ಸಂಯುಕ್ತಗಳಾದ ಥೈಮೊಕ್ವಿನೋನ್, ಕಾರ್ವಾಕ್ರೋಲ್, ಟಿ-ಅನೆಥೋಲ್ ಮತ್ತು 4-ಟೆರ್ಪಿನಿಯೋಲ್ ಇದರ ಪ್ರಬಲವಾದ ಆ್ಯಂಟಿ ಆಕ್ಸಿಡೆಂಟ್ಗಳಿಗೆ ಮುಖ್ಯ ಕಾರಣ ಎನ್ನಲಾಗುತ್ತದೆ. ಆದರೂ ಕಲೋಂಜಿಯಲ್ಲಿ ಕಂಡುಬರುವ  ಆ್ಯಂಟಿ ಆಕ್ಸಿಡೆಂಟ್  ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಯಿಲ್ ಪುಲ್ಲಿಂಗ್ ರೋಗಗಳನ್ನು ತಡೆಗಟ್ಟಬಹುದು