Select Your Language

Notifications

webdunia
webdunia
webdunia
webdunia

ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?

ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?
ಮೈಸೂರು , ಶನಿವಾರ, 27 ನವೆಂಬರ್ 2021 (15:18 IST)
ರಾತ್ರಿಯ ನಿದ್ರೆ ಎಷ್ಟು ಮುಖ್ಯ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಒಳ್ಳೆಯ ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುವುದು ಮಾತ್ರವಲ್ಲದೆ ತೂಕವನ್ನು ಇಳಿಸಲು ಕೂಡ ಸಹಾಯವಾಗುತ್ತದೆ.
ಮಾನಸಿಕ ಮತ್ತು ದೈಹಿಕ ಆಯಾಸದಿಂದ ಮುಕ್ತಿ ಪಡೆಯಲು, ನವ ಚೈತನ್ಯವನ್ನು ಪಡೆಯಲು ನಿದ್ರೆ ಸಹಾಯ ಮಾಡುತ್ತದೆ. ಆದರೂ ಕೆಲವು ಕಾರಣಗಳಿಂದಾಗಿ ನೀವು ಸಾಕಷ್ಟು ಪ್ರಮಾಣದ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಅದು ಒತ್ತಡ, ಕಿರಿಕಿರಿಗೆ ಕಾರಣವಾಗುತ್ತದೆ.
ನಿದ್ರೆ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ನಿದ್ರೆ ಮಾಡುವಾಗ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಗಂಟಲು ಮತ್ತು ನಾಲಿಗೆಯ ಹಿಂದೆ ಇರುವ ಮೇಲ್ಭಾಗದ ಶ್ವಾಸನಾಳದಲ್ಲಿ ಮೃದು ಅಂಗಾಂಶಗಳಲ್ಲಿನ ಕುಸಿತದಿಂದ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಹಾರ್ವರ್ಡ್ ಹೆಲ್ತ್ ಪ್ರಕಾರ, ಈ ಅಂಗಾಂಶಗಳು ನಿಮ್ಮ ನಿದ್ರೆಯ ಸಮಯದಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಇದರಿಂದ ಉಸಿರಾಟದ ತೊಂದರೆ ಮತ್ತು ಅಸಮರ್ಪಕ ನಿದ್ರೆಯ ಸಮಸ್ಯೆ ಎದುರಾಗುತ್ತದೆ.
ನಿದ್ರೆ ಮಾಡುವಾಗ ಹೊಟ್ಟೆಯ ಮೇಲೆ ಭಾರ ಹಾಕಿ ಮಲಗುವ ಬದಲು ಬೆನ್ನಿನ ಮೇಲೆ ಭಾರ ಹಾಕಿ ಮಲಗುವುದರಿಂದ ನಿದ್ರೆಯ ಸಮಸ್ಯೆಯನ್ನು ನಿಯಂತ್ರಿಸಬಹುದು. ನಾವು ಮಲಗಿರುವಾಗ ಉಸಿರಾಟ ಮತ್ತು ಬೆವರುವಿಕೆಯಿಂದ ತೂಕವನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ, ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು.
ನಿದ್ರೆಯ ಸಮಸ್ಯೆಯು ನಾವು ತಿನ್ನುವ ಆಹಾರ, ಹೆಚ್ಚಿನ ಹಸಿವು ಮತ್ತು ಕ್ಯಾಲೋರಿ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ತೂಕ ಹೆಚ್ಚಳದೊಂದಿಗೆ ಸಂಬಂಧಿಸಿದೆ ಎಂದು ಅಧ್ಯಯನಗಳು ತಿಳಿಸಿವೆ.
ಚೆನ್ನಾಗಿ ನಿದ್ರೆ ಮಾಡುವುದರಿಂದ ಕ್ಯಾಲೋರಿ ಸೇವನೆಯ ಹೆಚ್ಚಳವನ್ನು ತಡೆಯಬಹುದು. ಸರಿಯಾದ ಎಂಟು ಗಂಟೆಗಳ ನಿದ್ರೆಯನ್ನು ಪಡೆಯುವುದು ಕ್ಯಾಲೋರಿ ಸೇವನೆ ಮತ್ತು ಹಸಿವು ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ನೀವು ನಿದ್ರೆಯಿಂದ ವಂಚಿತರಾದಾಗ ಸಂಭವಿಸುತ್ತದೆ.
ಬೇಗ ಮಲಗುವುದರಿಂದ ತಡರಾತ್ರಿ ತಿಂಡಿಯನ್ನು ತಿನ್ನುವ ಅಭ್ಯಾಸವನ್ನು ತಡೆಯಬಹುದು. ಇದರಿಂದ ತೂಕ ಕಡಿಮೆಯಾಗುತ್ತದೆ. ನೀವು ಜಾಸ್ತಿ ಹೊತ್ತು ಎಚ್ಚರವಾಗಿದ್ದಷ್ಟೂ ಏನಾದರೂ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿದರೆ ನಿದ್ರೆ ತಂತಾನೇ ಬರುತ್ತದೆ. ನಿಯಮಿತ ವ್ಯಾಯಾಮ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಸಂಜೆ ದೈಹಿಕ ವ್ಯಾಯಾಮ ಮಾಡುವುದರಿಂದ ನಿಮ್ಮ ಚಯಾಪಚಯ ದರವನ್ನು 16 ಗಂಟೆಗಳವರೆಗೆ ಹೆಚ್ಚಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮಸಾಲಾ ಚಪಾತಿ ರುಚಿಕರವಾದ ಸ್ವಾಧ ! ಟ್ರೈ ಮಾಡಿ