Publish Date: Fri, 01 Jul 2022 (11:31 IST)
Updated Date: Fri, 01 Jul 2022 (11:34 IST)
ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಅಭಿಮಾನಿಗೆ ಖುದ್ದು ವಿಡಿಯೋ ಕರೆ ಮಾಡಿ ಸಾಂತ್ವನಿಸಿದ ನಟ ಜೂ.ಎನ್ ಟಿಆರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾರಕ್ ವಿಡಿಯೋ ಕರೆ ಮಾಡಿ ಅಭಿಮಾನಿಗೆ ಸಮಾಧಾನಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಕರೆ ವೇಳೆ ಅವರ ಫೋನ್ ನಂಬರ್ ಸ್ಪಷ್ಟವಾಗಿ ಬಹಿರಂಗವಾಗಿತ್ತು.
ಹೀಗಾಗಿ ಈಗ ತಾರಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಅವರ ಒಂದು ಸಂಪರ್ಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಮೊಬೈಲ್ ನಂಬರ್ ಲೀಕ್ ಆದರೆ ಕೇಳಬೇಕೇ? ಪುಣ್ಯಕ್ಕೆ ಇದು ಅವರ ಖಾಸಗಿ ನಂಬರ್ ಆಗಿರಲಿಲ್ಲ. ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿರುವ ಸಂಖ್ಯೆಯಾಗಿದೆ.