Publish Date: Wed, 29 Jun 2022 (08:50 IST)
Updated Date: Wed, 29 Jun 2022 (09:25 IST)
ಹೈದರಾಬಾದ್: ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಬಳಿ ಎಷ್ಟು ಕೋಟಿ ಆಸ್ತಿಯಿದೆ?
ಮೂಲಗಳ ಪ್ರಕಾರ ರಶ್ಮಿಕಾ ಪ್ರತೀ ಸಿನಿಮಾಗೆ 4 ಕೋಟಿ ರೂ.ಗಳಷ್ಟು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದಲ್ಲದೆ ಹಲವು ಜಾಹೀರಾತುಗಳಿಗೂ ರಶ್ಮಿಕಾ ಬ್ರಾಂಡ್ ಅಂಬಾಸಿಡರ್. ಇತ್ತೀಚೆಗೆ ಕಂಪನಿಯೊಂದರಲ್ಲಿ ಹೂಡಿಕೆಯನ್ನೂ ಮಾಡಿದ್ದರು.
ಹೀಗಾಗಿ ರಶ್ಮಿಕಾ ಒಟ್ಟಾರೆ ಆಸ್ತಿ 400 ಮಿಲಿಯನ್ ಡಾಲರ್ ಗಳಷ್ಟಿದೆ ಎನ್ನಲಾಗುತ್ತದೆ. ತಮ್ಮ ಸಿನಿಮಾ ಓಡಾಟಗಳಿಗೆ ಸುಲಭವಾಗಲೆಂದು ರಶ್ಮಿಕಾ ಹೈದರಾಬಾದ್, ಮುಂಬೈನಲ್ಲಿ ಸ್ವಂತ ಮನೆ ಕೂಡಾ ಮಾಡಿದ್ದಾರೆ. ಇದಲ್ಲದೆ ಬೆನ್ಜ್, ಆಡಿ ಅಂತಹ ದುಬಾರಿ ಕಾರುಗಳ ಒಡತಿ ರಶ್ಮಿಕಾ.