Publish Date: Tue, 28 Jun 2022 (15:50 IST)
Updated Date: Tue, 28 Jun 2022 (15:52 IST)
ನವದೆಹಲಿ: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನ ಈಗ ಸಿನಿಮಾ ರೂಪದಲ್ಲಿ ಬರಲಿದೆ.
ರಾಜಕೀಯ ರಂಗದ ಅಜಾತ ಶತ್ರು ಎಂದೇ ಕರೆಯಿಸಿಕೊಂಡಿದ್ದ ಬಿಜೆಪಿ ಧುರೀಣ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಕತೆಯಿರುವ ಸಿನಿಮಾಗೆ ಮೈ ರಹೂಂ ಯಾ ನ ರಹೂಂ ಯೇ ದೇಶ್ ರಹ್ನಾ ಚಾಹಿಯೆ ಎಂದು ಟೈಟಲ್ ಇಡಲಾಗಿದೆ.
ಉಲ್ಲೇಖ್ ಎನ್ ಪಿ ಬರೆದಿದ್ದ ದಿ ಅನ್ ಟೋಲ್ಡ್ ವಾಜಪೇಯಿ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಎಂಬವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಅಂದರೆ 2023 ರ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ. ಇದೇ ದಿನ ವಾಜಪೇಯಿ ಅವರ ಜನ್ಮದಿನವಿರುವುದು ವಿಶೇಷ. ಆದರೆ ತಾರಾಗಣದಲ್ಲಿ ಯಾರಿರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.