Publish Date: Mon, 27 Jun 2022 (16:23 IST)
Updated Date: Mon, 27 Jun 2022 (16:25 IST)
ಕೊಚ್ಚಿ: ಮಲಯಾಳಂ ಖ್ಯಾತ ನಟ ಎನ್ ಡಿ ಪ್ರಸಾದ್ ತಮ್ಮ ಮನೆಯ ಹಿತ್ತಲಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೀರೋ ಬಿಜು ಸಿನಿಮಾ ಖ್ಯಾತಿ ಎನ್ ಡಿ ಪ್ರಸಾದ್ ಕಳೆದ ಕೆಲವು ಸಮಯದಿಂದ ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಪ್ರಸ್ತುತ ಅವರ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ತಮ್ಮ ತಂದೆಯ ಮೃತದೇಹ ಕಂಡು ಗಾಬರಿಯಾದ ಇಬ್ಬರು ಮಕ್ಕಳು ನೆರೆಹೊರೆಯವರನ್ನು ಕರೆದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.