Select Your Language

Notifications

webdunia
webdunia
webdunia
webdunia

ಒಂದೇ ಒಂದು ಡ್ಯಾನ್ಸ್ ನಿಂದ ಬಾಲಿವುಡ್ ನಲ್ಲಿ ಬಿಗ್ ಆಫರ್ ಪಡೆದ ರಶ್ಮಿಕಾ ಮಂದಣ್ಣ

ಒಂದೇ ಒಂದು ಡ್ಯಾನ್ಸ್ ನಿಂದ ಬಾಲಿವುಡ್ ನಲ್ಲಿ ಬಿಗ್ ಆಫರ್ ಪಡೆದ ರಶ್ಮಿಕಾ ಮಂದಣ್ಣ
ಮುಂಬೈ , ಶುಕ್ರವಾರ, 1 ಜುಲೈ 2022 (10:30 IST)
ಮುಂಬೈ: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲೂ ಬೇಡಿಕೆಯ ನಟಿಯಾಗಿದ್ದಾರೆ. ಪ್ರಸ್ತುತ ರಶ್ಮಿಕಾ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಕ್ಕಲು ಕಾರಣ ಟಾಲಿವುಡ್ ನ ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರ. ಈ ಸಿನಿಮಾದ ಹಾಡಿನಲ್ಲಿ ರಶ್ಮಿಕಾ ಹಾಕಿದ್ದ ಸ್ಟೆಪ್ಸ್ ಟ್ರೆಂಡ್ ಆಗಿತ್ತು. ಈ ಸಿನಿಮಾದ ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಿದ್ದ ನೋಡಿ ಇಂಪ್ರೆಸ್ ಆದ ನಿರ್ದೇಶಕ ಸಂದೀಪ್ ರೆಡ್ಡಿ ತಮ್ಮ ಅನಿಮಲ್ ಸಿನಿಮಾಗೆ ರಶ್ಮಿಕಾರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರಂತೆ.

ಹೀಗಾಗಿ ಕೇವಲ ಒಂದು ಹಾಡಿನಿಂದ ರಶ್ಮಿಕಾಗೆ ಬಾಲಿವುಡ್ ನಲ್ಲಿ ಭರ್ಜರಿ ಆಫರ್ ಸಿಕ್ಕಿತು. ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು: ಅಭಿಮಾನಿಗಳಿಗೆ ಕುತೂಹಲ