Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ಧಾರವಾಹಿಯ ಮತ್ತೊಬ್ಬ ನಟ ಸ್ಯಾಂಡಲ್ ವುಡ್ ಗೆ ಲಗ್ಗೆ

ಜೊತೆ ಜೊತೆಯಲಿ ಧಾರವಾಹಿಯ ಮತ್ತೊಬ್ಬ ನಟ ಸ್ಯಾಂಡಲ್ ವುಡ್ ಗೆ ಲಗ್ಗೆ
ಬೆಂಗಳೂರು , ಭಾನುವಾರ, 11 ಅಕ್ಟೋಬರ್ 2020 (13:19 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯಾಗುತ್ತಿರುವ ಸುದ್ದಿ ಓದಿರುತ್ತೀರಿ. ಇದೀಗ ಅದೇ ಧಾರವಾಹಿಯ ಮತ್ತೊಬ್ಬ ನಟ ಸ್ಯಾಂಡಲ್ ವುಡ್ ಗೆ ಲಗ್ಗೆಯಿಡುತ್ತಿದ್ದಾರೆ.


ಈ ಧಾರವಾಹಿಯಲ್ಲಿ ನಾಯಕ ಆರ್ಯವರ್ಧನ್ ಸಹೋದರ ಹರ್ಷವರ್ಧನ್ ಪಾತ್ರ ಮಾಡುತ್ತಿರುವ ದೇವಯ್ಯ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಸೋಮವಾರ ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಮಾಹಿತಿ ನೀಡಲಿದ್ದಾರೆ ದೇವಯ್ಯ. ಈ ಧಾರವಾಹಿಯಲ್ಲಿ ಮುದ್ದು ಹುಡುಗನಾಗಿ ಕಾಣಿಸಿಕೊಳ್ಳುತ್ತಿರುವ ಹ್ಯಾಂಡ್ಸಮ್ ಹಂಕ್ ದೇವಯ್ಯ ಸಾಕಷ್ಟು ವರ್ಕೌಟ್ ಮಾಡಿ ಪಾತ್ರಕ್ಕಾಗಿ ತಯಾರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಬದಲಾವಣೆಯೊಂದಿಗೆ ಮತ್ತೆ ರಿಲೀಸ್ ಆಗಲಿದೆ ‘ದಿಯಾ’ ಸಿನಿಮಾ