Publish Date: Sat, 10 Oct 2020 (10:47 IST)
Updated Date: Sat, 10 Oct 2020 (10:49 IST)
ಬೆಂಗಳೂರು: ಸಾಹಿತಿ ಕೆ ಕಲ್ಯಾಣ್ ಮತ್ತು ಪತ್ನಿ ನಡುವಿನ ವೈಮನಸ್ಯಕ್ಕೆ ಕುಟುಂಬ ಸದಸ್ಯರ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಳ್ಳಲಾಗಿದೆ.
ಪತ್ನಿ ಅಶ್ವಿನಿ ಪತಿ ಕಲ್ಯಾಣ್ ರಿಂದ ವಿಚ್ಛೇದನ ಬಯಸಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ ಬಳಿಕ ವಿಚ್ಛೇದನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಇನ್ನು, ಮಾಟ ಮಂತ್ರ ಮಾಡಿ ದಂಪತಿ ನಡುವೆ ವೈಮನಸ್ಯ ತಂದಿತ್ತ ಶಿವಾನಂದ ವಾಲಿ ಬಂಧಿಸಲಾಗಿದ್ದು, ಗಂಗಾಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.