Publish Date: Sun, 11 Oct 2020 (10:01 IST)
Updated Date: Sun, 11 Oct 2020 (10:03 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿಗೆ ಸಿಸಿಬಿ, ಇಡಿ ವಿಚಾರಣೆ ಬಳಿಕ ಈಗ ಐಟಿ ವಿಚಾರಣೆ ಬಿಸಿ ತಾಕಲಿದೆ.
ಇಬ್ಬರೂ ನಟಿಯರ ಆದಾಯ ಮೂಲದ ಬಗ್ಗೆ ಈಗಾಗಲೇ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ. ಇದೀಗ ಐಟಿ ಇಲಾಖೆಯೂ ತನಿಖೆ ನಡೆಸುವ ಸಾಧ‍್ಯತೆಯಿದೆ. ಈಗಾಗಲೇ ಜಾಮೀನು ನಿರಾಕರಣೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯುತ್ತಿರುವ ನಟಿಯರಿಗೆ ತಮ್ಮ ಭವಿಷ್ಯ, ವೃತ್ತಿ ಜೀವನದ ಬಗ್ಗೆ ಚಿಂತೆ ಶುರುವಾಗಿದೆ. ಅದರ ಮೇಲೆ ಬರೆ ಎಂಬಂತೆ ಈಗ ಐಟಿ ಇಲಾಖೆಯೂ ತನಿಖೆ ನಡೆಸುವ ಸಾಧ‍್ಯತೆಯಿದೆ.