Publish Date: Sun, 04 Oct 2020 (16:54 IST)
Updated Date: Sun, 04 Oct 2020 (16:57 IST)
ಡ್ರಗ್ ಲಿಂಕ್ ತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರಿಗೆ ಮಹತ್ವದ ವಿಷಯಗಳು ಹೊರಬರುತ್ತಿವೆ.
ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಅಂಡರ್ವರ್ಲ್ಡ್ ಡಾನ್ಗಳ ಲಿಂಕ್ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ನಟಿಯರಾದ ಸಂಜನಾ ಮತ್ತು ರಾಗಿಣಿ ಅಲ್ಲದೇ ಬಂಧಿತರ ಕಾಲ್ ಡೀಟೈಲ್ಸ್ ನಲ್ಲಿ ಮಹತ್ವದ ಅಂಶಗಳು ಹೊರಬಂದಿವೆ ಎನ್ನಲಾಗಿವೆ.
ಹೀಗಾಗಿ ರೌಡಿಗಳು ಅಲ್ಲದೇ ಅಂಡರ್ವರ್ಲ್ಡ್ ಡಾನ್ ಗಳು ಡ್ರಗ್ ಪೆಡ್ಲರ್ ಗಳಾಗಿ ಕೆಲಸ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.