Select Your Language

Notifications

webdunia
webdunia
webdunia
webdunia

ತಾಯ್ತನವೇ ಬೇಡ ಎಂದ ನಟಿ ಪಾರುಲ್ ಯಾದವ್

ತಾಯ್ತನವೇ ಬೇಡ ಎಂದ ನಟಿ ಪಾರುಲ್ ಯಾದವ್
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (10:19 IST)
ಬೆಂಗಳೂರು: ಹತ್ರಾಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ಪಾರುಲ್ ಯಾದವ್ ತಾಯ್ತನವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.

 

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪಾರುಲ್ ತಾಯ್ತನವನ್ನೇ ತ್ಯಾಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಹೆಣ್ಣಿನ ಸಾರವೇ ತಾಯ್ತನ. ಆದರೆ ಇಂದು ನಾನು ತಾಯಿಯಾಗಲು ಬಯಸುವುದಿಲ್ಲ. ಹುಡುಗಿಯಾಗಿ ಈ ಮಾತು ಹೇಳುವುದು ಕಷ್ಟ. ಆದರೆ ನಿಜಕ್ಕೂ ನಾನು ತಾಯ್ತನವನ್ನು ತ್ಯಾಗ ಮಾಡುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಗತಿ? ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ. ಹತ್ರಾಸ್ ಘಟನೆ ಇದಕ್ಕೆ ಉದಾಹರಣೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸುದ್ದಿ ಕೊಟ್ಟ ಬರ್ತ್ ಡೇ ಗರ್ಲ್ ರಚಿತಾ ರಾಮ್