ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಎಂದರೆ ಅವರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಇದೀಗ ರಾಕಿಂಗ್ ಹಬ್ಬಕ್ಕೆ ಬರೋಬ್ಬರಿ ಎರಡು ತಿಂಗಳಿಗೂ ಹೆಚ್ಚು ಸಮಯವಿದ್ದು, ಈಗಲೇ ಅಭಿಮಾನಿಗಳು ಹಬ್ಬಕ್ಕೆ ಚಾಲನೆ ನೀಡಿದ್ದಾರೆ.
ಜನವರಿ 8 ಕ್ಕೆ ಯಶ್ ಬರ್ತ್ ಡೇ ಇದೆ. ಆದರೆ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೂರು ದಿನಕ್ಕೆ ಮೊದಲೇ ಅಡ್ವಾನ್ಸ್ ವಿಶ್ ಮಾಡುವ ಮೂಲಕ ಈಗಲೇ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಬಾರಿ ದಾಖಲೆಯ ಕೇಕ್ ಯಶ್ ಬರ್ತ್ ಡೇ ವಿಶೇಷವಾಗಿತ್ತು. ಈ ಬಾರಿ ಕೆಜಿಎಫ್ 2 ರಿಲೀಸ್ ಆಗುವ ಮೂಲಕ ಭರ್ಜರಿ ಗಿಫ್ಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.